ಇಂಗ್ಲೆಂಡ್ -ವಿಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ..!
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಜುಲೈ 16ರಿಂದ ಆರಂಭವಾಗಲಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಮ್ಯಾಚೆಂಸ್ಟರ್ ನಲ್ಲಿ ಮಳೆ ಬಿದ್ದಿದೆ. ಸದ್ಯ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಕೊರೋನಾ ವೈರಸ್‍ನಿಂದಾಗಿ ಕಳೆದ ನಾಲ್ಕು ತಿಂಗಳ ಬಳಿಕ ಇಂಗ್ಲೆಂಡ್ ಮೊದಲ ಬಾರಿ ಪಂದ್ಯವನ್ನು ಆಯೋಜನೆ ಮಾಡಿತ್ತು. ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಕೂಡ ಮಳೆ ಅಡ್ಡಿಪಡಿಸಿತ್ತು. ಬಳಿಕ ನಡೆದ ಪಂದ್ಯದಲ್ಲಿ ವೆಸ್ಟ್
ಇಂಡೀಸ್ 4 ವಿಕೆಟ್‍ಗಳಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು.
ಇದೀಗ ಇಂಗ್ಲೆಂಡ್ ತಂಡಕ್ಕೆ ನಾಯಕ ಜಾಯ್ ರೂಟ್ ತಂಡವನ್ನು ಸೇರಿಕೊಂಡಿರುವುದು ತಂಡದ ಆತ್ಮಬಲವನ್ನು ಹೆಚ್ಚಿಸಿದೆ. ಹಾಗೇ ಸ್ಟುವರ್ಟ್ ಬ್ರಾಡ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮೊದಲ ಟೆಸ್ಟ್ ಪಂದ್ಯದಿಂದ ಸ್ಟುವರ್ಟ್ ಬ್ರಾಡ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಬ್ರಾಡ್ ಅವರು ಕುಪಿತಗೊಂಡಿದ್ದರು. ಅಲ್ಲದೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಸ್ಟುವರ್ಟ್ ಬ್ರಾಡ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ಸಮರ್ಥನೆ ಕೂಡ ಮಾಡಿಕೊಂಡಿದ್ದರು.
ಇನ್ನೊಂದೆಡೆ ಮೊದಲ ಪಂದ್ಯದ ಗೆಲುವಿನಿಂದಾಗಿ ವಿಂಡೀಸ್ ಆಟಗಾರರ ಆತ್ಮವಿಶ್ವಾಸವೂ ಹೆಚ್ಚಿದೆ. ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಬೇಕು ಎಂಬ ಹಠದಲ್ಲಿದೆ ಜೇಸನ್ ಹೋಲ್ಡರ್ ಬಳಗ. ಬ್ಲ್ಯಾಕ್ ವುಡ್ ಅತ್ಯುತ್ತಮ ಫಾರ್ಮ್‍ನಲ್ಲಿದ್ದಾರೆ. ಮೊದಲ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಬ್ಲ್ಯಾಕ್‍ವುಡ್ ಅವರು ಆಕರ್ಷಕ 95 ರನ್ ದಾಖಲಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು.
ಇಂಗ್ಲೆಂಡ್ ಸಂಭವನೀಯ ತಂಡ- ಜಾಯ್ ರೂಟ್ (ನಾಯಕ), ರೋರಿ ಬನ್ರ್ಸ್, ಡಾಮ್ ಸಿಬ್ಲೆ, ಝಾಕ್ ಕ್ರಾವ್ಲೆ, ಬೆನ್ ಸ್ಟೋಕ್ಸ್, ಒಲಿಯ್ ಪಾಪ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಡಾಮ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್.
ವೆಸ್ಟ್ ಇಂಡೀಸ್ ಸಂಭವನೀಯ ತಂಡ – ಜೇಸನ್ ಹೋಲ್ಡರ್ (ನಾಯಕ), ಜಾನ್ ಕ್ಯಾಂಬೆಲ್, ಕ್ರೇಗ್ ಬ್ರಾತ್ ವೈಟ್, ಶಾಮ್ರಾಹ್ ಬ್ರೂಕ್ಸ್, ಶಾಯ್ ಹೋಪ್, ರೊಸ್ಟನ್ ಚೇಸ್, ಜೆರ್ಮಿನ್ ಬ್ಯಾಕ್‍ವುಡ್, ಶಾನ್ ಡೋವ್ರಿಚ್, ಅಲ್ಝಾರಿ ಜೋಸೆಫ್, ಕೇಮರ್ ರಾಚ್, ಶಾನೋನ್ ಗ್ಯಾಬ್ರಿಯೇಲ್.








