ದಿಗ್ಗಜರ ಜೊತೆ ಹೆಸರು ಬರೆಸಿಕೊಂಡ ಇಂಗ್ಲೆಂಡ್ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್
ಇಂಗ್ಲೆಂಡ್ ಟೆಸ್ಟ್ ತಂಡದ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ನಾಲ್ಕು ಸಾವಿರ ರನ್ ಮತ್ತು 150 ವಿಕೆಟ್ ಉರುಳಿಸಿದ್ದ ವಿಶ್ವದ ಎರಡನೇ ಆಲ್‍ರೌಂಡರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಸೌತಾಂಪ್ಟನ್‍ನಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಈ ಸಾಧನೆಯನ್ನು ಮಾಡಿದ್ದಾರೆ. ವೆಸ್ಟ್ ಇಂಡೀಸ್‍ನ ಅಲ್ಝಾರಿ ಜೋಸೆಫ್ ಅವರನ್ನು ಬೆನ್ ಸ್ಟೋಕ್ಸ್ ಅವರು 150ನೇ ಬಲಿ ಪಡೆದುಕೊಂಡ್ರು. ಈ ಮೂಲಕ ಸ್ಟೋಕ್ಸ್ ಅವರು ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಬೆನ್ ಸ್ಟೋಕ್ಸ್ ಅವರು ಮೊದಲ ಇನಿಂಗ್ಸ್‍ನಲ್ಲಿ 49 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್‍ನ ಇಯಾನ್ ಬೋಥಾಮ್ ಕೂಡ ಇದೇ ರೀತಿಯ ಸಾಧನೆ ಮಾಡಿದ್ದರು. ಇನ್ನುಳಿದಂತೆ ಈ ಸಾಧನೆ ಮಾಡಿದವರು ಅಂದ್ರೆ ಭಾರತದ ಕಪಿಲ್ ದೇವ್, ನ್ಯೂಜಿಲೆಂಡ್‍ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ವೆಸ್ಟ್ ಇಂಡೀಸ್‍ನ ಗ್ಯಾರಿ ಸೋಬರ್ಸ್.
ಬೆನ್ ಸ್ಟೋಕ್ಸ್ 63 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ರೆ, ಬೆನ್ ಸ್ಟೋಕ್ಸ್ 64 ಪಂದ್ಯಗಳಲ್ಲಿ ಇಯಾನ್ ಬಾಥವ್ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಬೆನ್ ಸ್ಟೋಕ್ಸ್ ಬ್ಯಾಟಿಂಗ್‍ನಲ್ಲೂ ಮಿಂಚು ಹರಿಸಿದ್ದರು. ಮೊದಲ ಇನಿಂಗ್ಸ್ ನಲ್ಲಿ ಆಕರ್ಷಕ 43 ರನ್ ದಾಖಲಿಸಿದ್ದರು.