ADVERTISEMENT
Thursday, July 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಇನ್ನು ಮುಂದೆ ಪಿಎಫ್ ಹಣ ಪಡೆಯುವುದು ನೀರು ಕುಡಿದಷ್ಟೇ ಸುಲಭ -34 ಕೋಟಿ ಉದ್ಯೋಗಿಗಳ ಖಾತೆಗೆ ಬೀಳಲಿದೆ ಬಡ್ಡಿ ಹಣ : ಕೋಟ್ಯಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್

Shwetha by Shwetha
July 9, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಬೆಂಗಳೂರು: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುದಿನಗಳ ನಿರೀಕ್ಷೆಯ ನಂತರ ಜುಲೈ 15 ರಂದು ಸುಮಾರು 34 ಕೋಟಿ ಖಾತೆಗಳಿಗೆ ಶೇ. 8.25 ರಷ್ಟು ಬಡ್ಡಿಯನ್ನು ಜಮಾ ಮಾಡುವುದಾಗಿ ಇಪಿಎಫ್‌ಒ ಘೋಷಿಸಿದೆ. ಒಟ್ಟು 1.44 ಲಕ್ಷ ಕೋಟಿ ರೂಪಾಯಿ ಬಡ್ಡಿ ಹಣ ಈ ಬಾರಿ ಉದ್ಯೋಗಿಗಳ ಖಾತೆ ಸೇರಲಿದೆ.

ಕೇವಲ ಬಡ್ಡಿ ಅಷ್ಟೇ ಅಲ್ಲದೆ ಪಿಎಫ್ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಲು ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು (CITES 2.01) ಜಾರಿಗೆ ತರಲಾಗಿದೆ. ಇದರಿಂದಾಗಿ ಇನ್ನು ಮುಂದೆ ದೇಶದ ಯಾವುದೇ ಮೂಲೆಯಲ್ಲಿರುವ ಇಪಿಎಫ್‌ಒ ಕಚೇರಿಯಿಂದ ಉದ್ಯೋಗಿಗಳು ತಮ್ಮ ಪಿಎಫ್ ಸಂಬಂಧಿತ ಸೇವೆಗಳನ್ನು ಪಡೆಯಬಹುದು. ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದ ಕ್ಲೈಮ್ ತಿರಸ್ಕೃತವಾಗುವ ಸಾಧ್ಯತೆಗಳು ಶೇಕಡಾ 80 ರಷ್ಟು ಕಡಿಮೆಯಾಗಲಿವೆ.

Related posts

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

E20ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ: ನಿತಿನ್ ಗಡ್ಕರಿ

July 9, 2026
ನನಗೂ ಬೇಕಾದ ಖಾತೆ ಸಿಗಲಿಲ್ಲ ಆದ್ರೆ ನನಗೆ ದುಃಖನೂ ಇಲ್ಲ ಸಂತೋಷನೂ ಇಲ್ಲ : ಸತೀಶ್ ಜಾರಕಿಹೊಳಿ

ಸಂಪುಟ ವಿಸ್ತರಣೆ ಆದ್ರೂ ಸರ್ಕಾರ ಅಲುಗಾಡಲ್ಲ, ಡಿಕೆ ಶಿವಕುಮಾರ್ ಅವರೇ ಗಟ್ಟಿಯಾಗಿ ಇರ್ತಾರೆ: ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್

July 9, 2026

ಹೊಸ ನಿಯಮಗಳ ಪ್ರಕಾರ ಆಟೋ ಕ್ಲೈಮ್ ಸೆಟಲ್‌ಮೆಂಟ್ ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಹಣ ಬೇಕಾದಾಗ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರಲಿದೆ. ಉದ್ಯೋಗಿಗಳು ತಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್‌ನಲ್ಲಿ ಶೇ. 75 ರಷ್ಟು ಹಣವನ್ನು ಸುಲಭವಾಗಿ ವಿತ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಉದ್ಯೋಗ ಬದಲಿಸುವವರಿಗೂ ಇಪಿಎಫ್‌ಒ ಸಮಾಧಾನಕರ ಸುದ್ದಿ ನೀಡಿದೆ. ಇನ್ನು ಮುಂದೆ ಕಂಪನಿ ಬದಲಾಯಿಸಿದಾಗ ಪಿಎಫ್ ಹಣವನ್ನು ವರ್ಗಾಯಿಸಲು ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆಧಾರ್ ಲಿಂಕ್ ಆಗಿರುವ ಯುಎಎನ್ (UAN) ಹೊಂದಿದ್ದರೆ ನಿಮ್ಮ ಪಿಎಫ್ ಮತ್ತು ಸೇವಾ ಅವಧಿ ತಾನಾಗಿಯೇ ಹೊಸ ಕಂಪನಿಯ ಖಾತೆಗೆ ವರ್ಗಾವಣೆಯಾಗುತ್ತದೆ.

ಪೆನ್ಷನ್ ಪಡೆಯುವವರಿಗೂ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿದ್ದು, ಸಿಪಿಪಿಎಸ್ (CPPS) ವ್ಯವಸ್ಥೆಯ ಮೂಲಕ ಭಾರತದ ಯಾವುದೇ ಬ್ಯಾಂಕ್ ಖಾತೆಯಲ್ಲಿ ಪಿಂಚಣಿ ಪಡೆಯಲು ಅವಕಾಶ ನೀಡಲಾಗಿದೆ. ಈ ಎಲ್ಲಾ ಬದಲಾವಣೆಗಳು ಜುಲೈ 15 ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಪಿಎಫ್ ಖಾತೆದಾರರ ದಶಕಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ.

ShareTweetSendShare
Join us on:

Related Posts

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

E20ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ: ನಿತಿನ್ ಗಡ್ಕರಿ

by Shwetha
July 9, 2026
0

ನಿತಿನ್ ಗಡ್ಕರಿ ಅವರು, E20 ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, E20 ಪೆಟ್ರೋಲ್‌ನಿಂದ ಯಾವುದೇ ಕಾರಿಗೆ ಸಮಸ್ಯೆಯಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ....

ನನಗೂ ಬೇಕಾದ ಖಾತೆ ಸಿಗಲಿಲ್ಲ ಆದ್ರೆ ನನಗೆ ದುಃಖನೂ ಇಲ್ಲ ಸಂತೋಷನೂ ಇಲ್ಲ : ಸತೀಶ್ ಜಾರಕಿಹೊಳಿ

ಸಂಪುಟ ವಿಸ್ತರಣೆ ಆದ್ರೂ ಸರ್ಕಾರ ಅಲುಗಾಡಲ್ಲ, ಡಿಕೆ ಶಿವಕುಮಾರ್ ಅವರೇ ಗಟ್ಟಿಯಾಗಿ ಇರ್ತಾರೆ: ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್

by Shwetha
July 9, 2026
0

ಬೆಳಗಾವಿ: ಸಂಪುಟ ವಿಸ್ತರಣೆ ಮಾಡಿದರೆ ಸರ್ಕಾರದ ಬುಡ ಅಲ್ಲಾಡುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ....

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ; ವಾಹನ ಸವಾರರಿಗೆ ಎಚ್ಚರಿಕೆ

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ; ವಾಹನ ಸವಾರರಿಗೆ ಎಚ್ಚರಿಕೆ

by Shwetha
July 9, 2026
0

ಶಿರಾಡಿ ಘಾಟ್‌ ಸೇರಿದಂತೆ ಹಾಸನ ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-75 (NH-75)ಯಲ್ಲಿ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. ಈ...

ಮತ ಹಾಕುವಾಗ ನಮ್ಮವರು, ಈಗ ಬಾಂಗ್ಲಾದವರಾ?- ಕುಮಾರಸ್ವಾಮಿಯದ್ದು ದ್ವಂದ್ವ ನಿಲುವು: ಮುಸ್ಲಿಂ ಸಮುದಾಯದ ಕುರಿತ ಹೇಳಿಕೆಗೆ ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ

ಮತ ಹಾಕುವಾಗ ನಮ್ಮವರು, ಈಗ ಬಾಂಗ್ಲಾದವರಾ?- ಕುಮಾರಸ್ವಾಮಿಯದ್ದು ದ್ವಂದ್ವ ನಿಲುವು: ಮುಸ್ಲಿಂ ಸಮುದಾಯದ ಕುರಿತ ಹೇಳಿಕೆಗೆ ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ

by Shwetha
July 9, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ...

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

ಫುಟ್‌ಪಾತ್ ತೆರವು ಬಳಿಕ GBAಯಿಂದ ವಿಶೇಷ ಸ್ವಚ್ಛತಾ ಅಭಿಯಾನ

by Shwetha
July 9, 2026
0

ಬೆಂಗಳೂರು ನಗರದಲ್ಲಿ ಫುಟ್‌ಪಾತ್‌ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, GBA ನಗರವ್ಯಾಪಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಸಜ್ಜಾಗಿದೆ. ಈ ಅಭಿಯಾನದಡಿ ರಸ್ತೆಬದಿಯ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಗೂ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram