ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯಿಂದ ಖಾತೆದಾರರಿಗೆ ಪ್ರಮುಖ ಮಾಹಿತಿ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ತನ್ನ ಖಾತೆದಾರರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ. ಇಪಿಎಫ್‌ಒ ಪಿಎಫ್ ಖಾತೆದಾರರಿಗೆ ಯಾವುದೇ ರೀತಿಯ ಆ್ಯಪ್ ಡೌನ್‌ಲೋಡ್ ಮಾಡುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದು, ಇದರಲ್ಲಿ ಪಿಎಫ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀಡದಂತೆ ತಿಳಿಸಿದೆ.
ಇಪಿಎಫ್‌ಒ ಈ ಕುರಿತ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. EPFO ನಿವೃತ್ತಿಯ ನಂತರ ಖಾತೆದಾರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಇಪಿಎಫ್‌ಒ ತನ್ನ ಟ್ವಿಟ್ಟರ್ ಖಾತೆಯಲ್ಲಿ ‘ಯುಎಎನ್ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಅಥವಾ ಬ್ಯಾಂಕ್ ಖಾತೆ ಕೇಳುವ ಯಾವುದೇ ಫೋನ್ ಕರೆಗಳಿಗೆ ಅಥವಾ ಸಂದೇಶಗಳಿಗೆ ಯಾವುದೇ ಮಾಹಿತಿಯನ್ನು ನೀಡದಂತೆ ತಿಳಿಸಿದೆ.
ಯಾವುದೇ ರೀತಿಯ ನಕಲಿ ಒಳಬರುವ ಕರೆಗಳನ್ನು ತಪ್ಪಿಸಲು ಇಪಿಎಫ್‌ಒ ಸಲಹೆ ನೀಡಿದೆ. ಖಾತೆದಾರರು ಈ ಎಚ್ಚರಿಕೆಗಳನ್ನು ಪಾಲಿಸದಿದ್ದರೆ, ಮುಂದೆ ಭಾರೀ ವಂಚನೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು EPFO ಎಚ್ಚರಿಕೆ ನೀಡಿದೆ.
2020-21ರ ಆರ್ಥಿಕ ವರ್ಷಕ್ಕೆ (FY21) ದೀಪಾವಳಿಗೆ ಮುಂಚಿತವಾಗಿ ಬಡ್ಡಿ ದರವನ್ನು ಕ್ರೆಡಿಟ್ ಮಾಡಬಹುದು. ಇಪಿಎಫ್‌ಒ ಕಚೇರಿಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಇಪಿಎಫ್‌ಒನ ಕೇಂದ್ರೀಯ ಮಂಡಳಿಯು ಬಡ್ಡಿಯ ಹೆಚ್ಚಳವನ್ನು ಅನುಮೋದಿಸಿದೆ ಮತ್ತು ಹಣಕಾಸು ಸಚಿವಾಲಯದ ಅನುಮೋದನೆಗಾಗಿ ಕಾಯುತ್ತಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಹಸಿ ಬೆಳ್ಳುಳ್ಳಿ ಅಥವಾ ಹೆಚ್ಚು ಬೆಳ್ಳುಳ್ಳಿ ಸೇವಿಸುವುದರ ದುಷ್ಪರಿಣಾಮಗಳು#Saakshatv #garlic https://t.co/mIxleAvTJY
— Saaksha TV (@SaakshaTv) September 7, 2021
ಅವಲಕ್ಕಿ ಲಡ್ಡು https://t.co/gV54PKVHOw
— Saaksha TV (@SaakshaTv) September 7, 2021
ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಗಿಡಮೂಲಿಕೆಗಳು/ಮಸಾಲೆಗಳು https://t.co/7L3i9zpXQY
— Saaksha TV (@SaakshaTv) September 6, 2021
ರೈಲ್ವೆ ಪ್ರಯಾಣಿಕರಿಗೆ ಇನ್ನು ಈ ವಿಶೇಷ ಸೌಲಭ್ಯ ಪಡೆಯಲು ಸಾಧ್ಯವಿಲ್ಲ https://t.co/0qqT2kqApa
— Saaksha TV (@SaakshaTv) September 6, 2021
#EPFO