ಭಾರತದ ಮಾರುಕಟ್ಟೆಗೆ ಬರಲಿದೆ ಅಗ್ಗದ ಬರ್ಡ್ ಎಲೆಕ್ಟ್ರಿಕ್ ಸ್ಕೂಟರ್..! ಇದರ ವೈಶಿಷ್ಠ್ಯಗಳೇನು..?
ನವದೆಹಲಿ: ಅನೇಕ ವೈಶಿಷ್ಠ್ಯಗಳನ್ನ ಒಳಗೊಂಡ ಬರ್ಡ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರಕಟ್ಟೆಗೆ ಲಗ್ಗೆ ಇಡುತ್ತಿದ್ದು, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ನೇನು 2 -3 ತಿಂಗಳು ಒಳಗೆ ES1+ ಹೆಸರಿನ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿಯಾಗಲಿದೆ ಎನ್ನಲಾಗಿದೆ.
ಮೋಟೋ ಅಭಿವೃದ್ಧಿ ಪಡಿಸಿದರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಮಾರಾಟ ಮಾಡಲು ಬರ್ಡ್ ಗ್ರೂಪ್ ಆಸ್ಟ್ರೇಲಿಯಾದ ವಿಮೋಟೋ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ. ಇನ್ನೂ ಮೂಲಗಳ ಪ್ರಕಾರ ಇದರ ಶೋರೂಮ್ ಬೆರೆ ಸುಮಾರು 50 ಸಾವಿರ ಇರಲಿದೆ ಎಂದು ಹೇಳಲಾಗಿದೆ.
ವೈಶಿಷ್ಠ್ಯಗಳು
1.6 ಕೆಡಬ್ಲ್ಯೂ ಎಲೆಕ್ಟ್ರಿಕ್ ಬ್ಯಾಟರಿ
ಒಂದು ಬಾರಿ ಚಾರ್ಜ್ ಮಾಡಿದರೆ 55 ಕಿ.ಮೀ ದೂರದವರೆಗೆ ಸಂಚರಿಸಬಹುದು
ಗಂಟೆಗೆ 45 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ
LED ಟೇಲ್ ಲ್ಯಾಂಪ್
LED ಹೆಡ್‌ಲ್ಯಾಂಪ್
LCD ಇನ್‌ಸ್ಟ್ರುಮೆಂಟ್ ಕ್ಲಸ್ಟರ್
1782 ಮೀ.ಮೀ ಉದ್ದ
727 ಮಿ.ಮೀ ಅಗಲ
1087 ಮಿ.ಮೀ ಎತ್ತರ
140 ಮಿ.ಮೀ ಗ್ರೌಂಡ್ ಕ್ಲಿಯರನ್ಸ್
62 ಕೆಜಿ ತೂಕ
ಬ್ಯಾಟರಿ 3ಎಎಚ್ ಲಿಥಿಯಾನ್ ಐಯಾನ್ ಬ್ಯಾಟರಿ
ಅಪ್ರಾಪ್ತ ಪ್ರಿಯತಮೆ ಮೇಲೆ ಅತ್ಯಾಚಾರವೆಸಗಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಪಾಪಿ..!
ಸಿಡಿ ಪ್ರಕರಣ | ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿ ವೈದ್ಯಕೀಯ ಪರೀಕ್ಷೆ