ಬಾಗಲಕೋಟೆ : ತಾಂಬೂಲ ಪ್ರಶ್ನೆ ವಿಚಾರವಾಗಿ ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ಧಾರೆ..
ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನ ಎಲ್ಲಾ ಕುಟುಂಬ ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದ್ರೆ ನಾನು ಟೀಕೆ ಮಾಡಲ್ಲ.
ಮಸೀದಿ ರಿಪೇರಿ ಮಾಡೋವಾಗ ದೇವರುಗಳ ನಕುರುಹು ಸಿಕ್ಕಿದೆ, ಅದೇ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ.
ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ್ದು ದೇವೇಗೌಡ & ಯಡಿಯೂರಪ್ಪ. ಕುಮಾರಸ್ವಾಮಿ ಅವರ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ.? ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮ ಮಂದಿರ ಬಗ್ಗೆ ಟೀಕೆ ಮಾಡಿದ್ರು. ಇವತ್ತಲ್ಲ ನಾಳೆ ಭವ್ಯ ರಾಮ ಮಂದಿರ ನಿಮಾ೯ಣವಾಗುತ್ತೆ. ಅದೇ ಕುಮಾರಸ್ವಾಮಿ, ಡಿಕೆಶಿ, ಸಿದ್ದರಾಮಯ್ಯ ದೇವೇಗೌಡರು ಅದೇ ರಾಮ ಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ ಎಂದಿದ್ದಾರೆ..
ಅಲ್ಲದೇ ಮೊನ್ನೆ ಡಿಕೆಶಿ ದಂಪತಿ ಸಮೇತ ಕೇದಾರನೋ ಎಲ್ಲೋ ದೇಗುಲಕ್ಕೆ ಹೋಗಿದ್ರು, ಸಂತೋಷ.. ಮುಸ್ಲಿಂ ಓಟ್ ಬೇಕು ಟೀಕೆ ಮಾಡಲಿ, ಆದ್ರೆ ತಾನೊಬ್ಬ ಹಿಂದೂ ಅನ್ನೋ ಮನೋಭಾವನೆ ಇದೆಯಲ್ಲಾ.. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ ಅವರಲ್ಲಿ ಒಳಗಡೆ ದೈವಭಕ್ತಿ ಇದೆ.. ಮುಸ್ಲಿಂರ ಓಟ್ ಗಾಗಿ ನಾಟಕ ಮಾಡ್ತಿದ್ದಾರೆ ಮಾಡಲಿ ಎಂದಿದ್ದಾರೆ..