ಬಿಜೆಪಿಗೆ ಈಶ್ವರಪ್ಪ ಈಗ ಬಳಸಿ ಬಿಸಾಡಿದ ಒಡೆದ ಮಡಕೆ!
ಬೆಂಗಳೂರು : ಬಿಜೆಪಿಗೆ ಈಶ್ವರಪ್ಪ ಈಗ ಬಳಸಿ ಬಿಸಾಡಿದ ಒಡೆದ ಮಡಕೆ ಎಂದು ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.
ಡಿಸಿಎಂ ಪಟ್ಟಕ್ಕಾಗಿ ಮಸಲತ್ತು ನಡೆಸುತ್ತಿರುವ ಕೆ.ಎಸ್.ಈಶ್ವರಪ್ಪ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ನಾನು ಹಿರಿಯ ಎನ್ನುತ್ತಾ ಸ್ಥಾನಮಾನಕ್ಕೆ ಅಂಗಲಾಚುತ್ತಿರುವ ಕೆ.ಎಸ್.ಈಶ್ವರಪ್ಪ ನವರಿಗೆ ರಿಟೈರ್ಡ್ ಆಗುವ ಮುಂಚೆಯೇ ಬಿಜೆಪಿ ಬಲವಂತವಾಗಿ ವಿಆರ್‍ಎಸ್ ಕೊಡುತ್ತಿದೆ! ಬಿಜೆಪಿಗೆ ಈಶ್ವರಪ್ಪ ಈಗ ಬಳಸಿ ಬಿಸಾಡಿದ ಒಡೆದ ಮಡಕೆ! ಈಶ್ವರಪ್ಪನವರೇ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಮುಂಚೆ ನಿಮ್ಮ ಸ್ಥಾನ ಮತ್ತು ಮಾನ ಉಳಿಸಿಕೊಳ್ಳುವುದನ್ನ ನೋಡಿ ಎಂದು ಟಾಂಗ್ ನೀಡಿದೆ.

ಇನ್ನು ಬಿಜೆಪಿಯಲ್ಲಿ ಮತ್ತೊಂದು ಜೋಡಿ ಬಿಜೆಪಿ ವರ್ಸಸ್ ಬಿಜೆಪಿ ಕಾದಾಟಕ್ಕೆ ಇಳಿದಿದೆ. ಆರ್ ಅಶೋಕ್ ಹಾಗೂ ವಿ.ಸೋಮಣ್ಣ ಕಿತ್ತಾಡಿದ್ದು ಅಭಿವೃದ್ಧಿಗಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಅಲ್ಲ, ಜನರ ಸಮಸ್ಯೆಗಳಿಗಲ್ಲ, ಬದಲಿಗೆ ಕುರ್ಚಿಗಾಗಿ! ಮನೆಯೊಂದು ಸಾವಿರ ಬಾಗಿಲಾಗಿರುವ ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರವೂ ಸಾಧ್ಯವಿಲ್ಲ, ರಾಜ್ಯದ ಅಭಿವೃದ್ಧಿಯೂ ಇಲ್ಲ ಎಂದು ಟೀಕೆ ಮಾಡಿದೆ.
ಲಸಿಕೆ ಕೊರತೆ ಎದುರಾಗಿ ಹಲವು ತಿಂಗಳುಗಳೇ ಕಳೆದಿವೆ, ದೆಹಲಿಗೆ ತೆರಳಿದ ಸಿಎಂ ಲಸಿಕೆಗಳ ಬದಲು ಕೇವಲ ‘ಭರವಸೆ’ ತುಂಬಿಕೊಂಡು ಬಂದಿದ್ದಾರೆ! ಸಿಎಂ ಬದಲಾದರೂ ರಾಜ್ಯದೆಡೆಗೆ ಕೇಂದ್ರದ ಮಲತಾಯಿ ಧೋರಣೆ ಮಾತ್ರ ಬದಲಾಗಿಲ್ಲ. ಲಸಿಕೆ ನೀಡಲಾಗದೆ ಜನರನ್ನು ಅಪಾಯಕ್ಕೆ ದೂಡುತ್ತಿರುವ ಈ ಅಸಾಮಥ್ರ್ಯಕ್ಕೆ ಬಿಜೆಪಿ ತಕ್ಕ ಬೆಲೆ ತೆರುವುದು ನಿಶ್ಚಿತ ಎಂದು ಕಾಂಗ್ರೆಸ್ ಎಚ್ಚರಿಸಿದೆ.








