ಬೆಂಗಳೂರು : ಶೀಘ್ರದಲ್ಲೇ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಶಾಶ್ವತ ಕಚೇರಿ ಸ್ಥಾಪಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ಬೆಂಗಳೂರಿನ ಗಲಭೆಯ ಬಗ್ಗೆ ವಿವರಿಸಿದ್ದೇನೆ.
ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಸುರಕ್ಷಿತವಾಗಿಡುವುದು ಅಗತ್ಯವಾಗಿದೆ.
ಹೀಗಾಗಿ ನಗರದಲ್ಲಿ ಎನ್ ಐಎ ಕಚೇರಿ ಸ್ಥಾಪಿಸಲು ಮನವಿ ಮಾಡಿದ್ದೇನೆ. ಎನ್ ಐಎ ಶಾಶ್ವತ ಕಚೇರಿ ಸ್ಥಾಪಿಸಲು ಅಮಿತ್ ಶಾ ಒಪ್ಪಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಬೆಂಗಳೂರಿನಲ್ಲಿ ಎನ್ ಐಎ ಕಚೇರಿ ಸ್ಥಾಪಿಸಲು ಬಿಜೆಪಿ ನಿರ್ಧರಿಸಿದೆ.
ದಳ್ಳಾಳಿಗೆ ಲಾಭವಿರುವ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ? : ಪ್ರತಾಪ್ ಸಿಂಹ
ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಎನ್ ಐಆರ್ ದಾಖಲಿಸಬೇಕೆಂದರೂ ಆಗುತ್ತಿರಲಿಲ್ಲ.
ಆದರೆ ಈಗ ಎನ್ ಐಎ ಸ್ಟೇಷನ್ ಹೌಸ್ ನಿರ್ಮಾಣವಾಗುತ್ತಿರುವುದರಿಂದ ರಾಜ್ಯದಲ್ಲಿ ಏನೇ ಆದರೂ ನಿಭಾಯಿಸಲು ಸುಲಭವಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.