ಯೂರೋ ಕಪ್ – ಡ್ರಾನಲ್ಲಿ ಅಂತ್ಯಗೊಂಡ ಇಂಗ್ಲೆಂಡ್ – ಸ್ಕಾಟ್ ಲೆಂಡ್ ಪಂದ್ಯ
ಯೂರೋ ಕಪ್ ಪುಟ್ ಬಾಲ್ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ ಲೆಂಡ್ ತಂಡಗಳ ನಡುವಿನ ಪಂದ್ಯ ಗೋಲು ರಹಿತವಾಗಿ ಡ್ರಾ ನಲ್ಲಿ ಅಂತ್ಯಗೊಂಡಿತ್ತು.
ಇದರೊಂದಿಗೆ ಇಂಗ್ಲೆಂಡ್ ನಾಲ್ಕು ಅಂಕಗಳೊಂದಿಗೆ ಡಿ ಬಣದಲ್ಲಿ 2ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯ್ತು. ಡಿ ಗುಂಪಿನಲ್ಲಿ ಚೆಕ್ ಗಣರಾಜ್ಯ ನಾಲ್ಕು ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಇದೀಗ ಉಭಯ ತಂಡಗಳಿಗೂ ಅಂತಿಮ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಇನ್ನು ಇ ಗುಂಪಿನ ಪಂದ್ಯದಲ್ಲಿ ಸ್ವೀಡನ್ 1-0 ಗೋಲುಗಳಿಂದ ಸ್ಲೊವೇಕಿಯಾ ತಂಡವನ್ನು ಪರಾಭವಗೊಳಿಸಿತು. ಸ್ವೀಡನ್ ತಂಡದ ಪರ ಎಮಿಲ್ ಫೋರ್ಸ್‍ಬರ್ಗ್ ಅವರು ಪಂದ್ಯದ 77ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನ ರೂವಾರಿಯಾದ್ರು.
ಲೀಗ್ ನ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಸ್ವೀಡನ್ ತಂಡ ಎರಡನೇ ಪಂದ್ಯವನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸ್ಲೋವಾಕಿಯೊ ಮೊದಲ ಪಂದ್ಯವನ್ನು ಗೆದ್ರೂ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಇನ್ನು ಗುಂಪಿನ ಪ್ರಬಲ ಸ್ಪೇನ್ ತಂಡ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಪೊಲೆಂಡ್ ತಂಡ ಮೊದಲ ಪಂಂದ್ಯವನ್ನು ಸೋತಿದೆ.
ಡಿ ಗುಂಪಿನ ಮತ್ತೊಂದು ಪಮದ್ಯದಲ್ಲಿ ಕ್ರೊವೇಶಿಯಾ ಮತ್ತು ಚೆಕ್ ಗಣರಾಜ್ಯ ತಂಡಗಳು 1-1ರಿಂದ ಸಮಬಲದ ಹೋರಾಟ ಪ್ರದರ್ಶಿಸಿವೆ.
ಚೆಕ್ ಗಣರಾಜ್ಯ ತಂಡದ ಪರ ಪಂದ್ಯದ 37ನೇ ನಿಮಿಷದಲ್ಲಿ ಪ್ಯಾಟ್ರಿಕ್ ಸ್ಚಿಕ್ ಅವರು ಮೊದಲ ಗೋಲು ದಾಖಲಿಸಿದ್ರು. ನಂತರ ಪಂದ್ಯದ 47ನೇ ನಿಮಿಷದಲ್ಲಿ ಕ್ರೊವೇಶಿಯಾ ತಂಡದ ಐವಾನ್ ಪೆರ್ಸಿಕ್ ಗೋಲು ದಾಖಲಿಸಿ ಅಂತರವನ್ನು ಸಮಗೊಳಿಸಿದ್ರು. ನಂತರದ ಆಟದಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ಸಾಕಷ್ಟು ಹೋರಾಟ ನಡೆಸಿದ್ದವು. ಅಂತಿಮವಾಗಿ ಡ್ರಾಗೆ ಸಮಾಧಾನಪಟ್ಟುಕೊಳ್ಳಬೇಕಾಯ್ತು. ಮೊದಲ ಪಂದ್ಯವನ್ನು ಸೋತಿರುವ ಕ್ರೋವೇಶಿಯಾ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.








