ಯೂರೋ ಕಪ್ ಫುಟ್ ಬಾಲ್ – ನಾಕೌಟ್ ಹಂತ ತಲುಪಿದ ಪೋರ್ಚ್‍ಗಲ್
ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಮೋಘ ಆಟವನ್ನಾಡಿದ್ದ ಸ್ಪೇನ್ ತಂಡ ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಇ ಗುಂಪಿನ ಲೀಗ್ ನ ಕೊನೆಯ ಪಂದ್ಯದಲ್ಲಿ ಸ್ಪೇನ್ ತಂಡ ಸ್ಲೊವೇಕಿಯಾ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಅಲ್ಲದೆ ಮನೆ ದಾರಿ ಹಿಡಿಯಬೇಕಾದ ಭೀತಿ ಕೂಡ ಇತ್ತು. ಆದ್ರೆ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದ ಸ್ಪೇನ್ 5-0 ಗೋಲುಗಳಿಂದ ಸ್ಲೊವೇಕಿಯಾ ತಂಡವನ್ನು ಸೋಲಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು 16ರ ಘಟ್ಟ ಪ್ರವೇಶಿಸಿದೆ.
ಸ್ಪೇನ್ ತಂಡದ ಪರ ಮಾರ್ಟಿನ್ ಡುಬ್ರಾವಿಕ್ , ಐಮೆರಿಕ್ ಲಾಪೊರ್ಟ್, ಪಾಬ್ಲೊ ಸರಬಿಯಾ, ಫೆರಾನ್ ಟೋರಿಸ್, ಜುರಾಜ್ ಕುಕಾ ಅವರು ತಲಾ ಒಂದೊಂದು ಗೋಲು ದಾಖಲಿಸಿದ್ರು.
ಇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸ್ವೀಡನ್ 3-2 ಗೋಲುಗಳಿಂದ ಪೋಲೆಂಡ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಸ್ವೀಡನ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥನಾದೊಂದಿಗೆ 16ರ ಘಟ್ಟ ತಲುಪಿತು.
ಎಫ್ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪೋರ್ಚ್ ಗಲ್ ಮತ್ತು ಫ್ರಾನ್ಸ್ ತಂಡಗಳು 2-2ರಿಂದ ಸಮಬಲ ಸಾಧಿಸಿವೆ. ಪೋರ್ಚ್ ಗಲ್ ತಂಡದ ಪರ ಕ್ರಿಸ್ಟಿಯಾನೊ ರೊನಾಲ್ಟೊ ಎರಡು ಗೋಲು ದಾಖಲಿಸಿದ್ರೆ, ಫ್ರಾನ್ಸ್ ತಂಡದ ಪರ ಕರೀಮ್ ಬೆಂಜೇಮಾ ಎರಡು ಗೋಲು ದಾಖಲಿಸಿ ತಂಡವನ್ನು ಸೋಲಿನಿಂದ ಬಚಾವ್ ಮಾಡಿದ್ರು.
ಈ ಮೂಲಕ ಫ್ರಾನ್ಸ್ ತಂಡ ಎಫ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ್ರೆ, ಜರ್ಮನಿ ಎರಡನೇ ಹಾಗೂ ಪೋರ್ಚ್‍ಗಲ್ ಮೂರನೇ ಸ್ಥಾನ ಪಡೆದುಕೊಂಡಿದೆ. ಎಫ್ ಗುಂಪಿನ ಮೂರು ತಂಡಗಳು ನಾಕೌಟ್ ಪ್ರವೇಶಿಸಿವೆ.
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಪೋರ್ಚ್ ಗಲ್ ವಿಶ್ವದ ನಂಬರ್ ವನ್ ಫುಟ್ ಬಾಲ್ ತಂಡವಾಗಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಎಫ್ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಜರ್ಮನಿ ತಂಡ 2-2 ಗೋಲುಗಳಿಂದ ಹಂಗೇರಿ ವಿರುದ್ಧ ಡ್ರಾಗೆ ಸಮಾಧಾನಪಟ್ಟುಕೊಂಡಿತ್ತು. ಜರ್ಮನಿ ತಂಡ ಪರ ಕೈ ಹಾವೆಟ್ರ್ಜ್ ಮತ್ತು ಲಿಯೊನ್ ಗೊರೆಟ್ಜ್ ಗೋಲು ದಾಖಲಿಸಿದ್ರೆ, ಹಂಗೇರಿ ಪರ ಆಡಮ್ ಸ್ಝಾಲಾಯ್ ಮತ್ತು ಆಂಡ್ರಿಯಾ ಸ್ಚೆಫಾರ್ ಗೋಲು ದಾಖಲಿಸಿದ್ರು.








