85 ರ ಇಳಿವಯಸ್ಸಿನಲ್ಲೂ ಚಿನ್ನ ಗೆದ್ದ ಕ್ರೀಡಾ ಪ್ರೇಮಿ.
ವಯಸ್ಸೆಂಬುದು ಕೇವಲ ಸಂಖ್ಯೆ ಅಷ್ಟೆ ಸಾಧಿಸುವ ಮನಸ್ಸಿಗೆ ಮುಪ್ಪು ಅಡ್ಡ ಬಾರದು ಎನ್ನುವುದನ್ನ 58 ರ ಅಜ್ಜ ಸಾಧಿಸಿ ತೋರಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ 85ರ ಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಮೂರು ಬಂಗಾರದ ಪದೆಕ ಗೆದ್ದು ಯುವಕರನ್ನೆ ನಾಚಿಸುವಂತಹ ಸಾಧನೆಯನ್ನ ಮಾಡಿದ್ದಾರೆ.
ಎಸ್ ಎಸ್ ಶರ್ಮ ಎಂಬ 85ರ ವಯಸ್ಸಿನ ತಾತ ಹಿಮಾಚಲದಲ್ಲಿ ಆಯೊಜಿಸಿದ್ದ ಮಾಸ್ಟರ್ಸ್ ಗೇಮ್ಸ್ 2021 ಎಂಬ ಕ್ರೀಡಾ ಕೂಟದಲ್ಲಿ ಜಾವೆಲಿನ್, ಶಾಟ್ಪುಟ್ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಹ್ಯಾಟ್ರಿಕ್ ಚಿನ್ನದ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ಸಂದರ್ಶನದಲ್ಲಿ ಮಾತನಾಡಿ ಫಿಟ್ ಹೈ ತೋ ಹಿಟ್ ಹೈ ಎಂಬ ಸಂದೇಶವನ್ನ ರವಾನಿಸಿದ್ದಾರೆ.
2018 -19 ರಲ್ಲೂ ಸಹ ಭಾಗವಹಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಕರೋನಾ ಕಾರಣದಿಂದಾಗಿ ಎರಡು ವರ್ಷ ಪಂದ್ಯಗಳು ಆಯೊಜನೆಗೊಂಡಿರಲಿಲ್ಲ, ಮತ್ತೆ ಈ ವರ್ಷದಿಂದ ಪುನರಾರಂಭಿಸಲಾಗಿದೆ. ತಮ್ಮ ಫಿಟ್ನೆಸ್ ಸೀಕ್ರೇಟ್ ತಿಳಿಸಿರುವ ಶರ್ಮಾ, ಪ್ರತಿದಿನ ಯೋಗ, ಊಟ, ಪಾನೀಯ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದಾಗಿ ಹೇಳಿದ್ದಾರೆ








