ಒಡಿಶಾ: ಸಮಾಜದಲ್ಲಿ ಬಹಿಷ್ಕಾರಕ್ಕೊಳಗಾದ ವ್ಯಕ್ತಿಯು ಆತನ ತಂದೆಯ ಕೊನೆಯ ವಿಧಿಗಳನ್ನು ನಿರ್ವಹಿಸಲು ಶವವನ್ನು ಸ್ವಂತವಾಗಿ ಸಾಗಿಸಬೇಕಾಯಿತು. ವಿಪರ್ಯಾಸ ಏನೆಂದರೆ ಸ್ವಂತ ಹಳ್ಳಿಗರು ಕೂಡ ಸಹಾಯ ಮಾಡಲು ನಿರಾಕರಿಸಿದರು. ಈ ಘಟನೆ ನಡೆದದ್ದು ಒಡಿಶಾದ ಬೋಲಂಗೀರ್ ಜಿಲ್ಲೆಯ ಲಂಕಾಬಹಲ್ ಗ್ರಾಮದಿಂದ ನಡೆದ ಘಟನೆಯು ನಮ್ಮ ದೇಶದಲ್ಲಿ ಬೇರು ಬಿಟ್ಟಿರುವ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಸಾಮಾಜಿಕ ಕಳಂಕಕ್ಕೆ ಕೈಗನ್ನಡಿ ಆಗಿದೆ.
ಇಂತಹ ಸಮಯದಲ್ಲಿ ಅವನಿಗೆ ಸಹಾಯ ಮಾಡಲು ಗ್ರಾಮಸ್ಥರು ಯಾರೂ ಮುಂದೆ ಬಾರದ ಕಾರಣ, ಆ ವ್ಯಕ್ತಿ ತನ್ನ ತಂದೆಯ ಶವವನ್ನು ಚೀಲದಲ್ಲಿ ಇರಿಸಿ ನಂತರ ಅದನ್ನು ತನ್ನ ಸೈಕಲ್‌ನ ಬದಿಗೆ ಕಟ್ಟಿ ಶವವನ್ನು ಶವಾಗಾರಕ್ಕೆ ಕೊಂಡೊಯ್ದನು. ಮನುಷ್ಯನು ಕೆಳಜಾತಿಗೆ ಸೇರಿದವನಾಗಿದ್ದರಿಂದ ಶವವನ್ನು ಕೊಂಡೊಯ್ಯಲು ಗ್ರಾಮಸ್ಥರು ನಿರಾಕರಿಸಿದರು.
ಮೃತ ವ್ಯಕ್ತಿಯನ್ನು ಅಖಾಯ ಪತ್ರ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಮೃತ ವ್ಯಕ್ತಿಯ ಪತ್ನಿ ಮಾತನಾಡಿ , ನಾವು ಕೆಳವರ್ಗದವರೆಂದು ಯಾರೂ ಸಹಾಯ ಮಾಡಲು ಮುಂದೆ ಬಂದಿಲ್ಲ ಎಂದು ತಿಳಿಸಿದರು.“ನನ್ನ ಗಂಡನ ಕೊನೆಯ ವಿಧಿಗಳಿಗೆ ಯಾರೂ ಮುಂದೆ ಬರಲಿಲ್ಲ. ನನ್ನ ಮಗ ಮತ್ತು ಸೋದರ ಮಾವ ಶವವನ್ನು ಬೈಸಿಕಲ್‌ನಲ್ಲಿ ಕೊಂಡೊಯ್ದು ಅಂತಿಮ ವಿಧಿಗಳನ್ನು ನೆರವೇರಿಸಿದರು, ”ಎಂದು ಅವರು ಹೇಳಿದರು.
ವಿಶೇಷವೆಂದರೆ, ಮೃತ ಸಂಬಂಧಿಕರ ಕೊನೆಯ ವಿಧಿಗಳನ್ನು ನೆರವೇರಿಸಲು ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಒಡಿಶಾ ಸರ್ಕಾರ 2013 ರಲ್ಲಿ ಹರಿಶ್ಚಂದ್ರ ಸಹಾಯತಾ ಯೋಜನೆಯನ್ನು ಪ್ರಾರಂಭಿಸಿದೆ. ಸರಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪುವಲ್ಲಿ ವಿಫಲ ಆಗುತ್ತಿದೆ ಅನ್ನುವುದಕ್ಕೆ ಇದೂ ಒಂದು ಸೂಕ್ತ ಕಾರಣ ಅಂತ ಹೇಳಬಹುದು








