ಬೆಳಗಾವಿ: ದುಷ್ಕರ್ಮಿಗಳು ಜಮೀನಿನಲ್ಲಿದ್ದ ಗೋವುಗಳನ್ನು ರಾತ್ರೋರಾತ್ರಿ ಕದ್ದು ಸಾಗಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.
ಜ. 7ರ ರಾತ್ರಿ ಉಮಾ ಸಂಪಗಾವ ಎಂಬುವವರಿಗೆ ಸೇರಿದ್ದ ಐದು ಗೋವುಗಳನ್ನು ಖದೀಮರು ದೋಚಿ ಪರಾರಿಯಾಗಿದ್ದರು. ಪತಿ ಕಳೆದುಕೊಂಡಿದ್ದ ಉಮಾ ಅವರು ಆಕಳುಗಳಿಂದಲೇ ಜೀವನ ಸಾಗಿಸುತ್ತಿದ್ದರು. ಆದರೆ, ಯಾರೋ ದುಷ್ಕರ್ಮಿಗಳು ರಾತ್ರಿ ವೇಳೆ ನುಗ್ಗಿ ನಾಲ್ಕು ಜರ್ಸಿ ಆಕಳು, ಒಂದು ಕರುವನ್ನು ಪಿಕಪ್ ವಾಹನದಲ್ಲಿ ಎತ್ತಿಕೊಂಡು ಹೋಗಿದ್ದಾರೆ.
ಮಧ್ಯರಾತ್ರಿ ಕದ್ದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಇಟ್ಟುಕೊಂಡು ಸವದತ್ತಿ ಪೊಲೀಸ್ ಠಾಣೆಯಲ್ಲಿ ಉಮಾ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿ ವಾರ ಕಳೆದರೂ ಪೊಲೀಸರು ಮಾತ್ರ ಆರೋಪಿಗಳನ್ನು ಪತ್ತೆ ಮಾಡಿಲ್ಲ.
ಸಿಸಿಟಿವಿ ದೃಶ್ಯವನ್ನು ನೀಡಿದಾಗ ಪಿಕ್‌ಅಪ್ ವಾಹನಕ್ಕೆ ನಂಬರ್ ಇಲ್ಲ ಎಂದು ಹೇಳಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉಮಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.








