ಮಡಿಕೇರಿ: ಆನೆ ನಡೆದದ್ದೇ ದಾರಿ ಎನ್ನುವುದೊಂದು ಗಾದೆ ಮಾತು ಆದರೂ, ಆನೆ ಪಥದಲ್ಲಿ ಕೃಷಿ ಚಟುವಟಿಕೆ, ರೆಸಾರ್ಟ್, ಹೋಂಸ್ಟೇ ಸೇರಿದಂತೆ ರಸ್ತೆ, ಸರ್ಕಾರಿ ಆಸ್ತಿ ಮುಟ್ಟುಗೋಲು ಮಾಡಿ ಕೊಡಗು ಜಿಲ್ಲೆಯ ಕಾಡಾನೆಗಳ ಪ್ರಮುಖ ಕಾರಿಡಾರಿನಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ.
ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲದಿದ್ದರೂ, ಆಹಾರ ಅರಸಿ ಒಂದು ಕಡೆಯಿಂದ ಮತ್ತೊಂದು ಎಡೆಗೆ ತೆರಳುವ ಗಜಪಡೆ ಕೇರಳ, ತಮಿಳುನಾಡು ಮೂಲಕ ಕರ್ನಾಟಕ ಪಶ್ಚಿಮ ಘಟ್ಟದವರೆಗೂ ತಲುಪುತ್ತವೆ. ಕಾರಣ ಇಷ್ಟೇ ಅವುಗಳಿಗೆ ಸೂಕ್ತವಾದ ಆಹಾರ ಕಾಡಿನಲ್ಲಿ ಲಭ್ಯವಿಲ್ಲ ಎಂದು ಅರ್ಥ.
ತಮಿಳುನಾಡಿನ ಮದುಮಲೈ ರಕ್ಷಿತಾರಣ್ಯ, ಕೇರಳದ ವೈನಾಡು ಸುತ್ತಮುತ್ತಲಿನ ಪ್ರದೇಶದಿಂದ ರಾಜ್ಯದ ಬಂಡೀಪುರ ತಲುಪಿ, ಕಬಿನಿ ಮೂಲಕ ನಾಗರಹೊಳೆ ಮೂಲಕ ಕೊಡಗು ಜಿಲ್ಲೆ ಪ್ರವೇಶಿಸಿ, ದಾರಿಯುದ್ದಕೂ ಮೇವು ಸಂಗ್ರಹಿಸುವುದರ ಜೊತೆ ಸಂತಾನಭಿವೃದ್ದಿ ಮಾಡಿಕೊಂಡು ಅವುಗಳ ಪರಂಪಾರಾಗೃತ ದಾರಿಯಲ್ಲಿ ಸಿಗುವ ಕಾಫಿ ಎಸ್ಟೇಟ್‍ಗಳನ್ನೇ ಕಾಡಾನೆಗಳು ತಮ್ಮ ಆವಾಸತಾಣ ಮಾಡಿಕೊಂಡಿವೆ.
ಈ ನಡುವೆ ಕಾಡಿನ ಅಂಚಿನಲ್ಲಿರುವ ಗ್ರಾಮದಲ್ಲಿ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ರೈಲು ಕಂಬಿ ಸಹಾಯದ ತಡೆಗೋಡೆ, ಮುಳ್ಳುತಂತಿ ಗೋಡೆ ಸೇರಿದಂತೆ ಸೋಲಾರ್ ಬೇಲಿ ಒಂದಡೆಯಾದರೆ, ಇನ್ನೊಂದೆಡೆ ಅವೈಜ್ಞಾನಿಕವಾಗಿ ವಿದ್ಯುತ್ ತಂತಿ ನಿರ್ಮಾಣ ಮಾಡಿರುವ ಪರಿಣಾಮ ಮೇವಿಗಾಗಿ ಹುಡುಕಾಟ ನಡೆಸುವ ಸಂದರ್ಭ ಕೆಲವೊಂದು ಸಂದರ್ಭ ಕಾಡಾನೆಗಳು ಅಕಸ್ಮಿಕವಾಗಿ ಅವೈಜ್ಞಾನಿಕ ವಿದ್ಯುತ್ ತಂತಿಗೆ ಸಿಲುಕಿ ಸಾವನಪ್ಪುತ್ತದೆ.
ಇದಕ್ಕೆ ತಾಜಾ ಉದಾಹರಣೆಯಂತೆ ಸುಂಟಿಕೊಪ್ಪದಲ್ಲಿ ತನ್ನ ಕೃಷಿ ರಕ್ಷಣೆಗೆ ವಿದ್ಯುತ್ ಕಳ್ಳತನ ಮಾಡಿ ಬೇಲಿ ನಿರ್ಮಿಸಿದಲ್ಲದೆ, ಆನೆ ಸತ್ತು ಎರಡು ಮೂರು ದಿನ ಕಳೆದರೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಅದರಂತೆ ಕೆಲವು ವರ್ಷಗಳ ಹಿಂದೆ ಅಮತ್ತಿ, ಗುಡ್ಡೆಹೊಸೂರು, ವಿರಾಜಪೇಟೆ ವ್ಯಾಪ್ತಿಯಲ್ಲಿ ಆನೆ ಹಿಂಡುಗಳು ದಾರುಣವಾಗಿ ಸಾವನಪ್ಪಿದೆ. ಅದರಲ್ಲೂ ಸಿದ್ದಾಪುರ ವ್ಯಾಪ್ತಿಯಲ್ಲಿ ಖಾಸಗಿ ಕಂಪೆನಿಗಳು ಸ್ಥಳೀಯರಿಂದ ಬ್ರಿಟೀಷರ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಕಾಫಿ ತೋಟದ ಪರಿಣಾಮ ಗ್ರಾಮದ ಒಳಗೂ ಪ್ರವೇಶಿಸುತ್ತಿದೆ,
ಆಗಾಗ್ಗ ನಗರ ಪ್ರದೇಶದಲ್ಲೂ ಕಾಣ ಸಿಗುತ್ತಿದೆ. ರಾಪಿಡ್ ರೆಸ್ಪಾನ್ಸ್ ಹೆಸರಿನ ಒಂದು ಅರಣ್ಯ ಇಲಾಖೆ ತಂಡ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಟೈಗರ್ ದೇವಯ್ಯ ನೇತೃತ್ವದ ತಂಡ ಕಾರ್ಯಪ್ರವೃತರಾಗಿದ್ದರೂ ಅಗತ್ಯ ಸಿಬ್ಬಂದಿ ಮತ್ತು ಮೂಲಭೂತ ವ್ಯವಸ್ಥೆಗಳೂ ಕಾಡುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel