‘ನಾಲ್ಕು ಕಾಲಿನ ಸೈನಿಕರು’..!! ಶ್ವಾನದಳದ ಕಾರ್ಯ ವೈಖರಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ..!
ಭಾರತಾಂಬೆಯ ಸೇವೆಗೆ ನಾಲ್ಕುಕಾಲಿನ ಸೈನಿಕರೂ ಸಹ ಶ್ರಮಿಸುತ್ತಾರೆ. ಅರೆ…ನಾಲ್ಕು ಕಾಲಿನ ಸೈನಿಕರೆಂದರೆ ಯಾರು ಎಂದು ತಲೆಕೆಡಿಸಿಕೊಳ್ಳಬೇಡಿ.. ಭಾರತೀಯ ಸೇನೆಯಲ್ಲಿ ಶ್ವಾನದಳವೂ ಕಾರ್ಯ ನಿರ್ವಹಿಸುತ್ತಿದೆ. ಶ್ವಾನಗಳು ಸಹ ನಮ್ಮೆಲ್ಲರ ರಕ್ಷಣೆ ಮಾಡುತ್ತಿವೆ. ಶ್ವಾನಲೋಕವೇ ವೈವಿಧ್ಯಮಯ. ದೈನಂದಿನ ಜೀವನದಲ್ಲಿ ಗಮನಿಸುವ ಶ್ವಾನಗಳಿಗಿಂತ ಸೇನೆಯಲ್ಲಿನ ಶ್ವಾನದಳ ಬಲು ವಿಭಿನ್ನ. ನಂಬಿಕಸ್ಥ ಪ್ರಾಣಿಗೆ ಮತ್ತೊಂದು ಹೆಸರು ಶ್ವಾನ. ಆದರೆ ನಂಬಿಕೆಯ ಜೊತೆಗೆ ದೇಶ ರಕ್ಷಣೆಯಲ್ಲಿಯೂ ಶ್ವಾನಗಳು ಮುಂದೆ. ಶ್ವಾನಗಳಲ್ಲಿ ಹತ್ತಾರು ಬಗೆಯ ತಳಿಗಳಿದ್ದರೂ ಎಲ್ಲ ತಳಿಯ ಶ್ವಾನಗಳನ್ನು ಸೇನೆಗೆ ಬಳಸಿಕೊಳ್ಳುವುದಿಲ್ಲ.
ಅವುಗಳ ಬುದ್ಧಿವಂತಿಕೆ ಮತ್ತು ತಾಕತ್ತಿನ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆ ಮಾಡಿದ ದಿನದಿಂದಲೇ ಕಟ್ಟುನಿಟ್ಟಿನ ತರಬೇತಿಯನ್ನು ಶ್ವಾನಗಳಿಗೆ ನೀಡಲು ಆರಂಭಿಸಲಾಗುತ್ತದೆ. ಮುಖ್ಯವಾಗಿ ಭದ್ರತೆ ಮತ್ತು ಸುರಕ್ಷತೆಯ ವಿಚಾರ ಬಂದಾಗ ಹೀಗೆ ತರಬೇತಿ ಪಡೆದ ಶ್ವಾನಗಳು ಸದಾ ಮುಂದೆ. ಇನ್ನು ಶ್ವಾನಗಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಸದಾ ಒತ್ತುನೀಡುವ ತರಬೇತುದಾರರು ಶ್ವಾನಲೋಕದಲ್ಲಿ ಕಳೆದು ಹೋಗಿರುತ್ತಾರೆ. ಸೇನೆಯಲ್ಲಿ ಬಳಸುವ ಬಹುಮುಖ್ಯ ಶ್ವಾನಗಳ ಪೈಕಿ ಸ್ವಿಟ್ಜರ್ಲೆಂಡ್ ಮೂಲದ ತಳಿಯ ಗ್ರೇಟ್ ಸ್ವಿಸ್ ಮೌಂಟೇನ್ ಸಹ ಒಂದು. ಸೇನೆಯಲ್ಲಿ ಈ ತಳಿಯ ಶ್ವಾನವನ್ನು ವಿರಳವಾಗಿ ಬಳಸಲಾಗುತ್ತದೆ. ಕಾವಲುಪಡೆಯಲ್ಲಿ ಈ ಶ್ವಾನಗಳು ನಿಸ್ಸೀಮ.
ಭಾರತದ ವಿಶೇಷ ಭದ್ರತಾ ಪಡೆ ಪ್ಯಾರಾ ಕಮಾಂಡೋಗಳ ತರಬೇತಿ ಎಷ್ಟು ಭಯಾನಯಕ ಅನ್ನೋದನ್ನ ನೀವು ತಿಳಿಯಲೇಬೇಕು..!
ಶಾಂತಸ್ವಭಾವದ ಈ ತಳಿಯ ಶ್ವಾನಗಳು ೬೯-೭೦ ಕಿಲೋ ತೂಗುತ್ತವೆ. ಇನ್ನು ಇತ್ತೀಚೆಗಷ್ಟೆ ಸೇನೆಗೆ ದೇಸಿ ತಳಿಯ ಮುಧೋಳ ಶ್ವಾನಗಳನ್ನು ಸೇರಿಸಿಕೊಳ್ಳಲಾಗಿದೆ. ಕಾವಲುಗಾರ ಮತ್ತು ಬೇಟೆಶ್ವಾನವಾಗಿ ಇವು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ತಳಿಯ ಶ್ವಾನಗಳು ತನ್ನ ಧೈರ್ಯ ಮತ್ತು ತಾಕತ್ತಿಗೆ ಹೆಸರುವಾಸಿ. ಇನ್ನು ಬಾಂಬ್ ಪತ್ತೆಗಾಗಿ ವಿದೇಶಿ ತಳಿಯ ಬೆಲ್ಜಿಯಂ ಮ್ಯಾರಿನಾಯಿಸ್ ಶ್ವಾನಗಳನ್ನು ಬಳಸಲಾಗುತ್ತದೆ. ಈ ತಳಿಯ ಶ್ವಾನಗಳನ್ನು ಭಾರತ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ.
‘RAW’ ರಣಧೀರರು..!! ಮಣ್ಣಲ್ಲಿ ಮಣ್ಣಾದ್ರೂ ದೇಶದ ಸೀಕ್ರೆಟ್ ಬಿಟ್ಟುಕೊಡದ ನಿಸ್ಸೀಮರು… ‘RAW’ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ..!
ಅಲ್ಲದೇ ಈ ತಳಿಯ ಶ್ವಾನಗಳು ತರಬೇತಿಯಲ್ಲಿ ಬಹುಬೇಗನೆ ಪಳಗುತ್ತವೆ. ಇನ್ನು ಬುದ್ಧಿವಂತಿಕೆ ಮತ್ತು ವಿಧೇಯಕತೆಗೆ ಹೆಸರಾಗಿರುವ ಲ್ಯಾಬ್ರಡಾರ್ ತಳಿಯ ಶ್ವಾನಗಳು ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಪರಾಧಿಗಳ ಪತ್ತೆ ಮತ್ತು ಬಾಂಬ್ ನಿಷ್ಕ್ರಿಯ ದಳದಲ್ಲಿ ಈ ಶ್ವಾನಗಳು ನಿಸ್ಸೀಮ. ಪರಮ ಬುದ್ಧಿವಂತಿಕೆಯ ಶ್ವಾನ ತಳಿ ಜರ್ಮನ್ ಷಫರ್ಡ್. ಈ ಶ್ವಾನಗಳಿಗೆ ಸೇನೆಯಲ್ಲಿ ವಿಶಿಷ್ಟ ಸ್ಥಾನವಿದೆ. ಪರಾಕ್ರಮ, ಬುದ್ಧಿವಂತಿಕೆ ಮತ್ತು ತಾಕತ್ತಿಗೆ ಈ ಶ್ವಾನಗಳು ಹೆಸರುವಾಸಿ. ಭಾರತೀಯ ಸೇನೆಯಲ್ಲಿ ಈ ತಳಿಯ ಶ್ವಾನಗಳು ಹೆಚ್ಚಿನ ವಿಭಾಗಗಳಲ್ಲಿ ಕಂಡುಬರುತ್ತವೆ. ದೇಶಾದ್ಯಂತ ಸೇನಾ ಶ್ವಾನಗಳಿಗೆ ತರಬೇತಿ ಕೇಂದ್ರಗಳು ಇವೆ. ಕಠಿಣ ತರಬೇತಿಯನ್ನು ಎದುರಿಸಿದ ಬಳಿಕವಷ್ಟೇ ಸೇನೆಗೆ ನಿಯೋಜನೆ ಮಾಡಲಾಗುತ್ತದೆ. ಯಾವುದೆ ಫಲಾಪೇಕ್ಷೆ ಬಯಸದೇ ದೇಶಸೇವೆಯಲ್ಲಿ ನಿರತವಾಗಿರುವ ಶ್ವಾನಗಳಿಗೆ ನಿಮ್ಮದೂ ಒಂದು ಮೆಚ್ಚುಗೆಯಿರಲಿ.
ನಮ್ಮ ನೆಮ್ಮದಿಯ ಹಿಂದಿದೆ ‘ಗಡಿ ಭದ್ರತಾ ಪಡೆ’..! – INDIAN ARMY