H.D.Kumaraswamy | ಪ್ರತಾಪ್ ಸಿಂಹ ಪಬ್ಲಿಸಿಟಿ ತಗೊಳೋದು ನಿಲ್ಲಿಸಿ ಜನರ ಕೆಲಸ ಮಾಡಿ
ರಾಮನಗರ : ಪ್ರತಾಪ್ ಸಿಂಹ ಪಬ್ಲಿಸಿಟಿ ತಗೊಳೋದು ನಿಲ್ಲಿಸಿ, ಜನರ ಕೆಲಸ ಮಾಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹೈವೇ ಕೆಲಸ ಉತ್ತಮವಾಗಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಬಿಡದಿಯಲ್ಲಿ ಟಾಂಗ್ ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಉತ್ತಮವಾದ ಕೆಲಸ ಏನಾಗಿದೆ ಎಂದು ಬಂದು ನೋಡೋದ್ದಕ್ಕೆ ಹೇಳಿ. ಇವರೇ ನಿಂತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ರಲ್ಲಾ. ಇವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟಫ ತೆಗೆಸಿಕೊಂಡ್ರು. ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು. ಅವರೇ ಹೈವೆಗೆ ಬಂದಿದ್ರೆ ಸ್ವಿಮ್ ಮಾಡಲಿಕ್ಕೆ ಚೆನ್ನಾಗಿ ನೀರು ನಿಂತಿತ್ತು ಎಂದು ಆಕ್ರೋಶ ಹೊರಹಾಕಿದರು.
ಇನ್ನು ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಆಗ್ತಿದೆ. ಕಣ್ಣಿದ್ರೆ ಬಂದು ನೋಡೋದಕ್ಕೆ ಹೇಳಿ, ಕೆರೆ ಒಡೆದಿರೋದರಿಂದ ಈ ರೀತಿ ಆಗಿರೋದಲ್ಲ, ಶಾಶ್ವತವಾದ ಕೆಲಸ ಆಗಬೇಕು..ಸರ್ಟಿಫಿಕೇಟ್ ಕೊಡಕ್ಕಲ್ಲ ಇರೋದು ಇವರು. ತಪ್ಪಾಗಿದ್ರೆ ಸರಿಪಡಿಸಬೇಕು.. ಕೆರೆ ಒಡೆದೋಯ್ತು ಅಂತಾ ಹೇಳೋದಕ್ಕಲ್ಲ. ಪ್ರತಾಪ್ ಸಿಂಹ ಪಬ್ಲಿಸಿಟಿ ತಗೊಳೋದು ನಿಲ್ಲಿಸಿ..ಜನರ ಕೆಲಸ ಮಾಡಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.