HDK | 2023ಕ್ಕೆ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ
ಧಾರವಾಡ : ಯಾರು ಏನೇ ಹೇಳಲಿ 2023ಕ್ಕೆ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ. 2023ರಲ್ಲಿ ನಾಡಿನ ಜನರ ಜೀವನ ಸರಿಪಡಿಸುವ ಸರ್ಕಾರ ಬರುತ್ತೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು, ಅದೇ ರೀತಿ ಆಕಸ್ಮಿಕವಾಗಿ ಸಿಎಂಯಾದೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ.
ಬೇರೆಯವರ ರೀತಿ ದುರಂಹಕಾರ ತೋರಿಸಲಿಲ್ಲ. 2023ರಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಹೆಸರೇಳದೇ ಅನ್ನ ಭಾಗ್ಯ ಯೋಜನೆಯನ್ನು ಟೀಕಿಸಿದ ಕುಮಾರಸ್ವಾಮಿ, ಅದೆಂತಹುದೋ ಪುಕ್ಕಟ್ಟೆ ಅಕ್ಕಿಯಂತೆ. ಐದು ಕೆಜಿ ಅಕ್ಕಿಯನ್ನು ಹತ್ತು ಕೆಜಿ ಅಂತೆಲ್ಲಾ ನಾನು ಹೇಳೊದಿಲ್ಲ..
ಈ ನಾಡಿದ ಜನರನ್ನ ಭಿಕಾರಿ ಮಾಡೋದನ್ನ ನಿಲ್ಲಿಸಿ. ನಾಡಿನ ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ. ಎಷ್ಟು ದಿನ ಪುಕ್ಕಟ್ಟೆ ಅಕ್ಕಿ ಕೊಟ್ಟ ಅದೇ ಜಾಗದಲ್ಲಿ ಇಡ್ತೀರಿ..? ಎಂದು ಪ್ರಶ್ನಿಸಿದ್ದಾರೆ.








