Siddaramaiah | ವಚನ ಭ್ರಷ್ಟತೆಯನ್ನು ಸಂಭ್ರಮಿಸಲು ಬಿಜೆಪಿಗೆ ಯಾಕಿಷ್ಟು ಉಮೇದು?
ಬೆಂಗಳೂರು : 2018ರ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಜನತೆಗೆ ನೀಡಿದ್ದ ಭರವಸೆಗಳಲ್ಲಿ ಶೇ. ಹತ್ತನ್ನೂ ಈಡೇರಿಸುವ ಪ್ರಯತ್ನವನ್ನು ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿಲ್ಲ, ಬಸವರಾಜ ಬೊಮ್ಮಾಯಿ ಅವರೂ ಮಾಡಿಲ್ಲ. ಈ ವಚನ ಭ್ರಷ್ಟತೆಯನ್ನು ಸಂಭ್ರಮಿಸಲು ಬಿಜೆಪಿಗೆ ಯಾಕಿಷ್ಟು ಉಮೇದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯ ಬಿಜೆಪಿ ಘಟಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ನಲ್ಲಿ… ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28 ರಂದು ಚಿಕ್ಕಬಳ್ಳಾಪುರದಲ್ಲಿ ವರ್ಷಾಚರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಭ್ರಷ್ಟ ಹಣದಿಂದಲೇ ಅಧಿಕಾರಕ್ಕೆ ಬಂದು, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಈ ಸರ್ಕಾರದ ವರ್ಷದ ಸಂಭ್ರಮವನ್ನು “ಭ್ರಷ್ಟೋತ್ಸವ” ಎಂದು ಕರೆದರೆ ಅರ್ಥಪೂರ್ಣವಾಗುತ್ತದೆ..
ಮೊಸರು, ಹಾಲು, ಮಂಡಕ್ಕಿ ಮುಂತಾದ ಬಡಜನರ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿದರೂ ಜಿಎಸ್‌ಟಿ ಕೌನ್ಸಿಲ್ ನಲ್ಲಿ ಈ ಬಗ್ಗೆ ಉಸಿರೆತ್ತದ @BSBommai, ಬಡವರ ಅನ್ನ ಕಸಿದದ್ದನ್ನೇ ತಮ್ಮ ಸಾಧನೆಯೆಂದು ಸಂಭ್ರಮಿಸಲು ಹೊರಟಿದ್ದಾರೆಯೇ? 5/6#ಭ್ರಷ್ಟೋತ್ಸವ
— Siddaramaiah (@siddaramaiah) July 26, 2022
40% ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್‌ಐ ನೇಮಕಾತಿ ಮತ್ತು ಉಪನ್ಯಾಸಕರ ನೇಮಕಾತಿ ಹಗರಣಗಳು ಬಿಜೆಪಿ ಸರ್ಕಾರದ ವರ್ಷದ ಸಾಧನೆಯಾಗಿದೆ. ಇಷ್ಟೆಲ್ಲಾ ಆರೋಪಗಳಿದ್ದರೂ ಒಮ್ಮೆಯೂ ತಮ್ಮನ್ನು ತಾವು ನ್ಯಾಯಯುತ ತನಿಖೆಗೆ ಒಳಪಡಿಸಿಕೊಳ್ಳದೆ ಸರ್ಕಾರ ಭಂಡತನ ಮೆರೆದಿದೆ.
ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು ಜುಲೈ 26, ಬಸವರಾಜ ಬೊಮ್ಮಾಯಿ ಅವರು ಆರ್.ಎಸ್.ಎಸ್ ನಿಂದ ನೇಮಕಗೊಂಡದ್ದು ಜುಲೈ 28. ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದಾ ಎಂದು ಪ್ರಶ್ನಿಸಿದ್ದಾರೆ.
ಆಪರೇಷನ್ ಕಮಲದ ಮೂಲಕ @BSYBJP ಅವರು ಮುಖ್ಯಮಂತ್ರಿಯಾಗಿದ್ದು ಜುಲೈ 26, @BSBommai ಅವರು ಆರ್.ಎಸ್.ಎಸ್ ನಿಂದ ನೇಮಕಗೊಂಡದ್ದು ಜುಲೈ 28.
ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದಾ? 3/6#ಭ್ರಷ್ಟೋತ್ಸವ— Siddaramaiah (@siddaramaiah) July 26, 2022
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನ ತರಲಾಗದೆ ಕೇಂದ್ರದ ಬಿಜೆಪಿ ನಾಯಕರ ಎದುರು ಮಂಡಿಯೂರಿ ಶರಣಾದ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಎಸಗಿದ ದ್ರೋಹವನ್ನೇ ಸಂಭ್ರಮಾಚರಣೆ ಮಾಡಲು ಹೊರಟಿದೆಯೇ ಎಂದು ಪ್ರಶ್ನಿಸಿದ್ದಾರೆ.
ಮೊಸರು, ಹಾಲು, ಮಂಡಕ್ಕಿ ಮುಂತಾದ ಬಡಜನರ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿದರೂ ಜಿಎಸ್‌ಟಿ ಕೌನ್ಸಿಲ್ ನಲ್ಲಿ ಈ ಬಗ್ಗೆ ಉಸಿರೆತ್ತದ ಬಸವರಾಜ ಬೊಮ್ಮಾಯಿ, ಬಡವರ ಅನ್ನ ಕಸಿದದ್ದನ್ನೇ ತಮ್ಮ ಸಾಧನೆಯೆಂದು ಸಂಭ್ರಮಿಸಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.








