ಚಂಡೀಗಢ: ನಟಿ ಹಾಗೂ ಸಂಸದೆ ಕಂಗನಾ (Kangana Ranaut) ವಿರುದ್ಧ ಟೀಕಿಸುವ ಭರದಲ್ಲಿ ಮಾಜಿ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂಸದೆ ಕಂಗನಾ, ರೈತರ ಪ್ರತಿಭಟನೆಯ (Farmer Protest) ಸಂದರ್ಭದಲ್ಲಿ ಅತ್ಯಾಚಾರದ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರವು ರೈತ ಹೋರಾಟ ನಿಗ್ರಹಿಸುವ ಸಂಬಂಧ ಕಠಿಣ ನಿಲುವುಗಳನ್ನು ಕೈಗೊಂಡಿತು. ನಾಯಕರು ಬಲವಾಗಿರದಿದ್ದರೆ ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮಲ್ಲಿಯೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಆಗ ಈ ರೀತಿಯ ಹೇಳಿಕೆ ನೀಡದಂತೆ ಬಿಜೆಪಿ ಎಚ್ಚರಿಕೆ ನೀಡಿತ್ತು. ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಎಂದು ಕಂಗನಾ ಬಿಂಬಿಸಿದ್ದು ವಿವಾದವಾಗಿತ್ತು. ಮಹಿಳೆಯರು ಕೇವಲ 100 ರೂ. ಕೂಲಿಗೆ ಧರಣಿ ಮಾಡಲು ಬರುತ್ತಾರೆ ಎಂದು ಕೂಡ ಹೇಳಿ ವಿವಾದಕ್ಕೆ ಸಿಲುಕಿದ್ದರು.
ಇದನ್ನು ವಿರೋಧಿಸುವ ಭರದಲ್ಲಿ ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅತ್ಯಾಚಾರ ಹೇಗೆ ನಡೆಯುತ್ತವೆ ಎಂದು ಕಂಗನಾರನ್ನು ಕೇಳಿ. ಅದರ ಅನುಭವ ಆಕೆಗೆ ಇದೆ ಎಂದು ಹೇಳಿದ್ದಾರೆ.