ನವದೆಹಲಿ: ಪಂಜಾಬ್ ನಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಸತತ 6ನೇ ದಿನವೂ ವಾಯುಮಾಲಿನ್ಯ ಮುಂದುವರಿದಿದ್ದು ಉಸಿರಾಡುವ ಗಾಳಿ ವಿಷವಾಗುತ್ತಿದೆ. ಸೋಮವಾರ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 1,500ರ ಗಡಿ ದಾಟಿದೆ ಎಂದು ತಿಳಿದು ಬಂದಿದೆ.
ದೆಹಲಿಯ ಮುಂಡ್ಕಾದಲ್ಲಿ ಎಕ್ಯೂಐ 1591 ಎಕ್ಯೂಐ, ದ್ವಾರಕ-8ನೇ ಸೆಕ್ಟಾರ್ನಲ್ಲಿ ಎಕ್ಯೂಐ 1,497 ಹಾಗೂ ರೋಹಿಣಿ ಸೆಕ್ಟಾರ್ನಲ್ಲಿ 1,427 ಎಕ್ಯೂಐ ದಾಖಲಾಗಿದೆ.
ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. ಅಪಾಯದ ಮಟ್ಟ ಮೀರಿದ ಮಾಲಿನ್ಯ ನಿಯಂತ್ರಣಕ್ಕೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ನ 4ನೇ ಹಂತವನ್ನು ದೆಹಲಿ ಸರ್ಕಾರ ಜಾರಿ ಮಾಡಿದೆ. ಯಾವುದೇ ಮುಂಜಾಗ್ರತೆ ವಹಿಸಲಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹುಲ್ಲು ಸುಡುತ್ತಿರುವುದೇ ದೆಹಲಿ ಮಾಲಿನ್ಯಕ್ಕೆ ಕಾರಣ ಎನ್ನಲಾಗಿದೆ. ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಹುಲ್ಲು ಸುಡುವುದರಿಂದಾಗಿ ಈ ಸಮಸ್ಯೆ ಉದ್ಭವವಾಗುತ್ತಿದೆ ಎನ್ನಲಾಗಿದೆ.