ಕೆಲಸ ಬಿಡೋ ಆಲೋಚನೆಯಲ್ಲಿರೋರು ಈ ಸುದ್ದಿ ಓದಿ
ನೀವು ಕೆಲಸ ಬಿಡುವ ಆಲೋಚನೆಯಲ್ಲಿದ್ದೀರಾ..? ಹಾಗಾದ್ರೆ ನೀವು ನೋಟಿಸ್ ಪಿರಿಯಡ್ ಅನ್ನು ಮುಗಿಸಿಯೇ ಕೆಲಸ ಬಿಡೋದೇ ಒಳ್ಳೆಯದು.
ಯಾಕೆಂದ್ರೆ ನೀವು ಈ ನೋಟಿಸ್ ಪಿರಿಯಡ್ ಯಾರ್ ಮಾಡ್ತಾರೆ ಅಂತ ತಕ್ಷಣಕ್ಕೆ ಕೆಲಸ ಬಿಟ್ಟರೇ 18 % ಜಿಎಸ್ ಟಿ ಕಂಪನಿಗೆ ಕಟ್ಟಲೇಬೇಕಾಗುತ್ತದೆ.
ಹೌದು..! ಸಾಮಾನ್ಯವಾಗಿ ನಾವು ಕೆಲಸ ಮಾಡುವ ಕಂಪನಿಯಿಂದ ಬೇರೆ ಕಂಪನಿಗೆ ಹೋಗಬೇಕಾದ್ರೆ, ಮೊದಲು ಪ್ರಸ್ತುತ ಕೆಲಸ ಮಾಡುತ್ತಿರೋ ಕಂಪನಿಯಲ್ಲಿ ನೋಟಿಸ್ ಪಿರಿಯಡ್ ಮುಗಿಸಿಕೊಂಡು ಬೇರೆ ಕಂಪನಿಗೆ ಹೋಗಬೇಕು.
ಆದ್ರೆ ಇತ್ತೀಚಿನ ದಿನಗಳಲ್ಲಿ ಈ ನೋಟಿಸ್ ಪಿರಿಯಡ್ ಗೆ ಬಹಳಷ್ಟು ಮಂದಿ ತಲೆಕೆಡಿಸಿಕೊಳ್ಳುತ್ತಿಲ್ಲ. ಬೇರೆ ಕಂಪನಿಯಲ್ಲಿ ಹೆಚ್ಚಿನ ವೇತನದ ಕೆಲಸ ಸಿಕ್ಕರೇ ಸಾಕು, ತಮ್ಮ ಮೇಲ್ವಿಚಾರಕರಿಗೆ ಒಂದು ಮೆಸೆಜ್ ಮಾಡಿ ಕೆಲಸ ಬಿಟ್ಟು ಬಿಡ್ತಾರೆ.
ಹೀಗೆ ನೋಟಿಸ್ ಪಿರಿಯಡ್ ಪೂರ್ಣಗೊಳಿಸದೇ ಮಧ್ಯದಲ್ಲಿಯೇ ಕೆಲಸ ಬಿಡುವ ಉದ್ಯೋಗಿಗಳ ನಡವಳಿಕೆ ಬಗ್ಗೆ ಎಎಆರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಹೀಗಾಗಿ ನೋಟಿಸ್ ಪಿರಿಯಡ್ ಪೂರ್ಣಗೊಳಿಸದೇ ಉದ್ಯೋಗ ಬಿಟ್ಟರೇ, 18% ಜಿಎಸ್‍ಟಿ ಹೊರೆಯನ್ನು ಭರಿಸಬೇಕಾಗುತ್ತದೆ ಎಂದು ಗುಜರಾತ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಮಹತ್ವದ ಆದೇಶವನ್ನು ನೀಡಿದೆ.
ಇದಕ್ಕೆ ಕಾರಣ ಅಹಮದಾಬಾದ್ ಮೂಲದ ರಫ್ತು ಕಂಪನಿಯೊಂದರ ನೌಕರನೊಬ್ಬ ಮೂರು ತಿಂಗಳ ನೋಟಿಸ್ ಪಿರಿಯಡ್‍ನಲ್ಲಿ ಕೆಲಸ ಮಾಡಿರಲಿಲ್ಲ.
ಈ ಕುರಿತು ಕಂಪನಿ ಎಎಆರ್ ಗೆ ದೂರು ನೀಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಎಎಆರ್, ಉದ್ಯೋಗಿಯು ಕಂಪನಿಗೆ ಪಾವತಿಸಬೇಕಾದ ಮೊತ್ತಕ್ಕೆ ಶೇ.18ರ ಜಿಎಸ್‍ಟಿ ವಿಧಿಸಿದೆ.
ಅಂದರೇ ಸಾಮಾನ್ಯವಾಗಿ ಎಲ್ಲ ಕಂಪನಿಗಳಲ್ಲಿ ಮೂರು ತಿಂಗಳು ನೋಟಿಸ್ ಪಿರಿಯಡ್ ಇರುತ್ತದೆ.
ಒಂದು ವೇಳೆ ಉದ್ಯೋಗಿ ಅವಧಿಗೆ ಮುನ್ನವೇ ಕೆಲಸ ಬಿಟ್ಟರೆ, ಆತ ಮೂರು ತಿಂಗಳ ವೇತನವನ್ನು ಕಂಪನಿಗೆ ಕೊಡಬೇಕಾಗುತ್ತದೆ. ಇದೀಗ ಎಎಆರ್ ಆದೇಶದನ್ವಯ ಇನ್ಮುಂದೆ ಉದ್ಯೋಗಿಯು ಅವಧಿಗೂ ಮುನ್ನ ಕೆಲಸ ಬಿಟ್ಟರೇ ತನ್ನ ವೇತನದ ಮೇಲೆ ಶೇ.18ರ ಜಿಎಸ್‍ಟಿಯನ್ನು ಸರಕಾರಕ್ಕೆ ಕಟ್ಟಬೇಕಾಗುತ್ತದೆ.
ಅಂದಹಾಗೆ ಇದೇ ರೀತಿಯ ಘಟನೆ ಈ ಹಿಂದೆ ನಡೆದಾಗ ನೋಟಿಸ್ ಪಿರಿಯಡ್ ಸಂಬಂಧ ತೆರಿಗೆ ಕಟ್ಟಬೇಕಿಲ್ಲ ಎಂದು ಮದ್ರಾಸ್ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು.