ಕೇಂದ್ರ ಬಜೆಟ್ 2021-22ರಲ್ಲಿ ರೈಲ್ವೆ ಕ್ಷೇತ್ರದ ನಿರೀಕ್ಷೆಗಳು ಯಾವುವು?
ಹೊಸದಿಲ್ಲಿ, ಜನವರಿ 31: ನಾಳೆಯಿಂದ ಕೇಂದ್ರ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಈ ಮೊದಲು ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರನ್ನು 2021-22ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಕೊರೋನಾ ಸಾಂಕ್ರಾಮಿಕದಿಂದ ಕುಸಿದಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಬಜೆಟ್ ಫಲಿತಾಂಶದ ಮೇಲೆ ಎಲ್ಲರ ಚಿತ್ತ ಕೇಂದ್ರೀಕರಿಸಿದೆ.

ಕೊರೋನವೈರಸ್ ಸಾಂಕ್ರಾಮಿಕದಿಂದ ಹಾನಿಗೊಳಗಾದ ಕ್ಷೇತ್ರಗಳು ಮತ್ತು ಕೈಗಾರಿಕೆಗಳಲ್ಲಿ ರೈಲ್ವೆ ಕೂಡ ಸೇರಿದ್ದರಿಂದ ಈ ವರ್ಷದ ಬಜೆಟ್‌ನಿಂದ ಭಾರತೀಯ ರೈಲ್ವೆಯೂ ಸೇರಿದಂತೆ ಪ್ರತಿ ವಲಯವು ಉತ್ತಮ ಮತ್ತು ತೃಪ್ತಿದಾಯಕ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದೆ. ಕೊರೋನವೈರಸ್ ಲಾಕ್ ಡೌನ್ ಸಮಯದಲ್ಲಿ ಬಹುತೇಕ ಎಲ್ಲಾ ಸೇವೆಗಳು ಸ್ಥಗಿತಗೊಂಡಿತ್ತು.
ಆದರೆ ಸಾಂಕ್ರಾಮಿಕ ಸಮಯದಲ್ಲಿ ರೈಲ್ವೆ ಸೇವೆಗಳು ಭಾಗಶಃ ಸಕ್ರಿಯವಾಗಿದ್ದು, ಅಂತಹ ಕಠಿಣ ಸಮಯದಲ್ಲಿ ಪ್ರಮುಖ ಪಾತ್ರವಹಿಸಿದವು ಮತ್ತು ಇದು ವಲಸಿಗರಿಗೆ ತಮ್ಮ ಊರಿಗೆ ಮರಳಲು ಸಹಾಯ ಮಾಡಿತು.
ಕೇಂದ್ರ ಬಜೆಟ್ 2021-22ರಲ್ಲಿ ರೈಲ್ವೆ ಕ್ಷೇತ್ರದ ನಿರೀಕ್ಷೆಗಳು ಯಾವುವು?
– ರೈಲ್ವೆಗಾಗಿ ಹಣಕಾಸು ಸಚಿವರು ಸುಮಾರು 1.79 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಬಹುದೆಂದು ರೈಲ್ವೆ ನಿರೀಕ್ಷಿಸುತ್ತಿದೆ. ಇದು ಹಿಂದಿನದಕ್ಕಿಂತ ಶೇಕಡಾ 7 ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
– ಈ ವರ್ಷ ಪ್ರವಾಸಿ ಕೇಂದ್ರಗಳು, ತೀರ್ಥಯಾತ್ರೆಯ ಸ್ಥಳಗಳು ಮತ್ತು ಇತರ ನಿರ್ಣಾಯಕ ಪ್ರದೇಶಗಳನ್ನು ಸಂಪರ್ಕಿಸುವಂತಹ ಕೆಲವು ಹೈಸ್ಪೀಡ್ ರೈಲುಗಳನ್ನು ಕೇಂದ್ರವು ಪ್ರಕಟಿಸುವ ನಿರೀಕ್ಷೆಯಿದೆ.

– ರೈಲ್ವೆ ಸಚಿವಾಲಯದ ವಿಷನ್ 2024 ಗೆ ಸಹಾಯ ಮಾಡುವ ಯೋಜನೆಗಳನ್ನು ಬಜೆಟ್ ಒಳಗೊಂಡಿರಬಹುದು. 2030 ರ ವೇಳೆಗೆ ಸಂಪೂರ್ಣ ಗ್ರೀನ್ ದೇಶಕ್ಕೆ ಉತ್ತೇಜನ ನೀಡಲು ‘ಹಸಿರು ರೈಲ್ವೆ’ ಯೋಜನೆಗಳನ್ನು ಒಳಗೊಂಡಿರಬಹುದು.
– ದೇಶದಲ್ಲಿ ಬುಲೆಟ್ ರೈಲಿನಲ್ಲಿ ವಿಸ್ತರಣೆ ಯೋಜನೆಯನ್ನು ಹಣಕಾಸು ಸಚಿವರು ಪ್ರಕಟಿಸುವ ನಿರೀಕ್ಷೆಯಿದೆ.
– ಕೃಷಿ ಸರಕುಗಳನ್ನು ಸಾಗಿಸಲು ವೇಗವಾಗಿ ಚಲಿಸಬಲ್ಲ ಕೆಲವು ತೇಜಸ್ ರೈಲುಗಳು ಮತ್ತು ಕೆಲವು ರೈಲ್ವೆ ಮಾರ್ಗಗಳನ್ನು ಸರ್ಕಾರ ಘೋಷಿಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://twitter.com/SaakshaTv/status/1355543939978199042?s=19
https://twitter.com/SaakshaTv/status/1355543729679949830?s=19








