ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುತ್ತಿದೆ. ಈಗಾಗಲೇ ಉಪೇಂದ್ರ ಅವರು ತಮ್ಮ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸಿದ್ದು, ಅಭಿಮಾನಿಗಳಲ್ಲಿ ಚಿತ್ರ ನೋವು ಕಾತುರ ಹೆಚ್ಚಾಗಿದೆ. ಈ ಮಧ್ಯೆ ಅಭಿಮಾನಿಗಳ ತಲೆಯಲ್ಲಿ ಉಪ್ಪಿ ಮತ್ತೊಂದು ಹುಳು ಬಿಟ್ಟಿದ್ದಾರೆ.
ಶುಕ್ರವಾರ 6 ಗಂಟೆ 3 ನಿಮಿಷಕ್ಕೆ ಯುಐ ಜಗತ್ತಿನ ಬಿಜಿಎಂ ದರ್ಶನ ಮಾಡಿಸಲು ಸಜ್ಜಾಗಿದೆ ಎನ್ನಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ದೂರದ ಹಂಗೇರಿ ದೇಶದ ಬುಡಾಪೆಸ್ಟ್‌ನಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿತ್ತು ಯುಐ ತಂಡ, ಕ್ರಿಯೇಟ್ ಆಗಿದ್ದ ಯುಐ ಸೌಂಡ್ ಮ್ಯಾಜಿಕ್ ಬಿಡಲು ತಯಾರಾಗಿದೆ. ಸೌಂಡ್ ಆಫ್ ಎಂದು ಬರೆದು ವಾಯಲಿನ್ ಫೋಟೋ ತೋರಿಸಿದ್ದಾರೆ.
ವಯೊಲಿನ್ ಮ್ಯೂಸಿಕ್ ಝಲಕ್ ಬಿಡುಗಡೆ ಮಾಡಬಹುದಾ ಎಂಬ ನಿರೀಕ್ಷೆ ಈಗ ಅಭಿಮಾನಿಗಳಲ್ಲಿದೆ. ಈ ಬಾರಿ ಕಿವಿಗೆ ಇಂಪು ಕೊಡುವ ಸಂಗೀತ ಬರೋದಂತೂ ಫಿಕ್ಸ್ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಉಪೇಂದ್ರ ನಿರ್ದೇಶಿಸಿರುವ ಚಿತ್ರ `ಯುಐ’. ಲಹರಿ ಫಿಲ್ಮ್ಸ್ ಜೊತೆ ವೀನಸ್ ಎಂಟರ್‌ಪ್ರೈಸ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ. `ಯುಐ’ ಮೂಲಕ ಸ್ಯಾಂಡಲ್‌ವುಡ್ ಇನ್ನೊಮ್ಮೆ ಜಗತ್ತಿನಾದ್ಯಂತ ಗೆದ್ದು ಸಂಭ್ರಮಿಸುವ ನಿರೀಕ್ಷೆಯೂ ಇದೆ.








