ಬೆಂಗಳೂರು: ಅಸ್ಸಾಂ ಎನ್ ಐಎ ಅಧಿಕಾರಿಗಳು ಜಿಗಣಿಯಲ್ಲಿ ಬಂಧಿತನಾಗಿದ್ದ ಉಲ್ಫಾ ಉಗ್ರನಿಂದ ಸ್ಫೋಟಕ ರಹಸ್ಯ ಬಯಲಾಗಿದೆ.
ಶಂಕಿತ ಉಗ್ರನ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಎನ್‌ಐಎ (NIA) ಅಧಿಕಾರಿಗಳು ಅಸ್ಸಾಂನ (Assam) ಉತ್ತರ ಲಖೀಂಪುರದಲ್ಲಿ ಜೀವಂತ ಐಇಡಿಗಳನ್ನು (ಸುಧಾರಿತ ಸ್ಫೋಟಕ ಸಾಧನ) ವಶಕ್ಕೆ ಪಡೆದಿದ್ದಾರೆ.
ಎನ್ ಐಎ ಅಧಿಕಾರಿಗಳ ವಿಚಾರಣೆ ವೇಳೆ ಶಂಕಿತ (Suspected Terrorist) ಉಗ್ರ ಗಿರಿಸ್ ಬೋರಾ ಅಲಿಯಾಸ್ ಗೌತಮ್, ಅಸ್ಸಾಂನಲ್ಲಿ ಐಇಡಿ ಇಟ್ಟ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾನೆ. ಆಗಸ್ಟ್ 15ರಂದು ಸ್ಫೋಟಿಸಲು ಸಂಜು ರೂಪಿಸಲಾಗಿತ್ತು ಎಂದೂ ಸಹ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಅಧಿಕಾರಿಗಳು ಲಖೀಂಪುರ ಜಿಲ್ಲೆಯಲ್ಲಿ ಇಟ್ಟಿದ್ದ ಕೆಲವು ಜೀವಂತ ಐಇಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆಯನ್ನೂ ಮುಂದುವರಿಸಿದ್ದಾರೆ.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಶೀದ್ ಆಲಿ ಸಿದ್ಧಕಿ ಕುಟುಂಬದ ತನಿಖೆ ಮುಂದುವರಿದಿದೆ.