ವ್ಯಾಪಕ ಮಳೆ : ಕದ್ರಾ ಜಲಾಶಯದಿಂದ ನೀರು ಹೊರಕ್ಕೆ Rainfall Saaksha tv
ಕಾರವಾರ : ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕದ್ರಾ ಹಾಗೂ ಕೊಡಸಳ್ಳಿ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಒಟ್ಟು 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿ ಬಿಡಲಾಗಿದೆ.
34.50 ಮೀಟರ್ ಗರಿಷ್ಠ ಸಾಮಥ್ರ್ಯ ಹೊಂದಿರುವ ಕದ್ರಾ ಜಲಾಶಯದ ಮಟ್ಟ ಇಂದು ಮಧ್ಯಾಹ್ನದ ಹೊತ್ತಿಗೆ 30.67 ಮೀಟರ್ ತಲುಪಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ಹಾಗೂ ಪ್ರವಾಹದ ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ ಒಟ್ಟು ಎರಡು ಬಾರಿ 8 ಗೇಟ್ಗಳ ಮೂಲಕ ಒಟ್ಟು 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ.
ಕದ್ರಾ ಜಲಾಶಯಕ್ಕೂ ಮೊದಲಿನ ಕೊಡಸಳ್ಳಿ ಜಲಾಶಯ ಕೂಡ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, 28,082 ಕ್ಯೂಸೆಕ್ ಒಳ ಹರಿವು ಕಂಡುಬಂದಿದೆ. ಈ ಕಾರಣದಿಂದ ಜಲಾಶಯ ತುಂಬುವ ಸಾಧ್ಯತೆ ಇರುವ ಕಾರಣ ಇಲ್ಲಿ ಕೂಡ ಎರಡು ಬಾರಿ ಒಟ್ಟು 4 ಗೇಟ್ ಗಳ ಮೂಲಕ 22,393 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ.