FACT CHECK : ಕೋವಿಡ್ ಲಸಿಕೆ ಪಡೆಯದಂತೆ ಆಫ್ರಿಕನ್ನರಿಗೆ ಒಬಾಮ ಮನವಿ
ನವದೆಹಲಿ: ಇಡೀ ವಿಶ್ವವೇ ಕೋವಿಡ್ ಲಸಿಕೆಯ ನಿರೀಕ್ಷೆಯಲ್ಲಿದೆ. ಆಧ್ರೆ ಇತ್ತ ಅಮೆರಿಕಾ ಮತ್ತು ಯುರೋಪ್ ಗಳಿಂದ ಬರುವ ಕೋವಿಡ್ ಲಸಿಕೆಗಳನ್ನು ಪಡೆದುಕೊಳ್ಳಬೇಡಿ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಫ್ರಿಕನ್ನರಿಗೆ ಮನವಿ ಮಾಡಿದ್ದಾರೆ ಎನ್ನುವಂತಹ ಸಂದೇಶವೊಂದು ಸದ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಭಾರೀ ಸಂಚಲನ ಸೃಷ್ಟಿ ಮಾಡಿದ್ದು, ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ.
ಅಮೆರಿಕಾದಲ್ಲಿ ದಾಂಧಲೆ : ಟ್ರಂಪ್ ವಿರುದ್ಧ ದೋಷಾರೋಪಣೆ
ಆದ್ರೆ ಈ ಸುದ್ದಿ ಸುಳ್ಳು ಅನ್ನೋದು ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ. ಅಮೆರಿಕ ಮತ್ತು ಯುರೋಪ್ ಗಳಿಂದ ಬರುವ ಲಸಿಕೆಗಳನ್ನು ಸ್ವೀಕರಿಸದಂತೆ ಆಫ್ರಿಕನ್ನರಿಗೆ ಬರಾಕ್ ಒಬಾಮ ಹೇಳುತ್ತಿದ್ದಾರೆ. ಆಫ್ರಿಕನ್ನರ ಮೇಲೆ ಈ ಬಿಳಿಯ ಜನರು ಮಾಡಲು ಹೊರಟಿರುವ ಈ ಕೆಟ್ಟ ಕ್ರಮದ ಕುರಿತು ನಾನು ಬಹಿರಂಗಪಡಿಸದೆ ಹೋದರೆ ನಾನೂ ಅದರಲ್ಲಿ ಶಾಮೀಲಾದಂತೆ ಆಗುತ್ತದೆ. ಎಷ್ಟಾದರೂ ನಾನು ಅಮೆರಿಕದಲ್ಲಿ ಹುಟ್ಟಿದ್ದರೂ, ನನ್ನದು ಆಫ್ರಿಕನ್ ರಕ್ತ ಎಂಬ ಹೇಳಿಕೆಯನ್ನ ಒಬಾಮ ನೀಡಿರೋ ರೀತಿಯಾದ ಪೋಸ್ಟ್ ಟ್ವಿಟ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದ್ರೆ ಫ್ಯಾಕ್ಟ್ ಚೆಕ್ ನಲ್ಲಿ ಇದು ಸುಳ್ಳು ಅನ್ನೋದು ಗೊತ್ತಾಗಿದೆ.
ಅಷ್ಟಕ್ಕೂ ಈ ಹಿಂದೆ ಅಂದ್ರೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಟ್ವೀಟ್ ಮಾಡಿದ್ದ ಬರಾಕ್ ಒಬಾಮ, ಹಿಂದಿಗಿಂತಲೂ ಅಪಾಯಕಾರಿಯಾಗಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಲಸಿಕೆ ಪಡೆದುಕೊಳ್ಳುವುದು ನಾವು ಮಾಡಬಹುದಾದ ಅತಿ ಮಹತ್ವದ ಸಂಗತಿಯಾಗಿದೆ. ಆದರೆ ವ್ಯಾಪಕವಾಗಿ ಲಸಿಕೆ ಲಭ್ಯವಾಗುವವರೆಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ವಾಸ್ತವವಾಗಿ ಹೆಚ್ಚು ಜೀವಗಳನ್ನು ಬದುಕಿಸಬಲ್ಲವು. ಜತೆಗೆ ಆರೋಗ್ಯ ಕಾಳಜಿ ಕಾರ್ಯಕರ್ತರ ಮೇಲಿನ ಒತ್ತಡವನ್ನು ತಗ್ಗಿಸಬಲ್ಲದು ಎಂದಿದ್ದರು.
ಆದ್ರೆ ಆಫ್ರಿಕನ್ನರು ಲಸಿಕೆ ಪಡೆದುಕೊಳ್ಳದಂತೆ ಒಬಾಮ ಅವರು ಮನವಿ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದೇ ರೀತಿಯ ಹೇಳಿಕೆಯನ್ನು ಕಳೆದ ವರ್ಷ ಕೂಡ ಹರಿಬಿಡಲಾಗಿತ್ತು. ಒಬಾಮ ಅವರು ಈ ರೀತಿ ಹೇಳಿಕೆ ನೀಡಿಲ್ಲ. ಅವರು ಲಸಿಕೆಯ ಪರವಾಗಿ ಇದ್ದಾರೆ ಎಂದು ಒಬಾಮ ಅವರ ವಕ್ತಾರೆ ಕೇಟಿ ಹಿಲ್ ತಿಳಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








