RCB ಗೆ ಫಾಪ್ ಡುಪ್ಲಸಿಸ್ ಕ್ಯಾಪ್ಟನ್.. ಏನ್ ಹೇಳ್ತೀರಾ..? faf-du-plessis-will-be-new-rcb-captain
ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಬೆಂಗಳೂರು ತಂಡ ದಕ್ಷಿಣ ಆಫ್ರಿಕಾದ ಸ್ಟಾರ್ ಫಾಫ್ ಡುಪ್ಲಸಿಸ್ ಅವರನ್ನು ಖರೀದಿಸಿದೆ.
2 ಕೋಟಿ ಮೂಲ ಬೆಲೆ ಹೊಂದಿದ್ದ ಡುಪ್ಲಸಿಸ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಂಚೈಸಿ 7 ಕೋಟಿ ರುಪಾಯಿಗಳನ್ನ ನೀಡಿದೆ.
ಫಾಫ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುತ್ತಿದ್ದಂತೆ ಕಳೆದ ಒಂದು ವರ್ಷದಿಂದ ಆರ್ ಸಿಬಿಯನ್ಸ್ ಗೆ ಕಾಡುತ್ತಿದ್ದ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಂತೆ ಆಗಿದೆ.
ಹೌದು…!! ಕಳೆದೊಂದು ವರ್ಷದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬೋದು ಚಿದಂಬರ ರಹಸ್ಯವಾಗಿತ್ತು.
ಇದೀಗ ಮೆಗಾ ಹರಾಜಿನಲ್ಲಿ ಡುಪ್ಲಸಿಸ್ ಅವರು ರೆಡ್ ಅಂಡ್ ಗೋಲ್ಡ್ ಕ್ಯಾಂಪ್ ಸೇರಿರುವುದರಿಂದ ಅವರೇ ತಂಡದ ನಾಯಕರಾಗುತ್ತಾರೆ ಅನ್ನೋ ಮಾತುಗಳು ಬಲವಾಗುತ್ತಿವೆ.
ಇದೇ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೆಲ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.
ಫಾಫ್ ಡುಪ್ಲಸಿಸ್ ಮುಂಬರುವ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.
“ನನ್ನ ಅಭಿಪ್ರಾಯದಲ್ಲಿ, ಫಾಫ್ ಡುಪ್ಲೆಸಿಸ್ RCB ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಅವರು ನಾಯಕನಾಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಕಳೆದ ವರ್ಷ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕನ ಅವಶ್ಯಕತೆ ಇದೆ.









