ಜನರಿಗೆ ಮಕ್ಮಲ್ ಟೋಪಿ ಹಾಕಿದ ನಕಲಿ ಬಾಬಾ!
ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ
ನಕಲಿ ಬಾಬಾ ವಿರುದ್ಧ ಎಫ್ ಐಆರ್ ದಾಖಲು
ತಾನು ಪ್ರೇಮ ಸಾಯಿ ಎಂದು ನಂಬಿಸಿ ಮೋಸ
1.5 ಕೋಟಿ ರೂಪಾಯಿ ಹಣ ವಂಚನೆ ಆರೋಪ
ರಾಮನಗರ : ರಾಮನಗರದ ಚನ್ನಪಟ್ಟಣದಲ್ಲಿ ನಕಲಿ ಬಾಬಾ ಜನರಿಗೆ ನಾಮ ಹಾಕಿದ್ದಾನೆ.
ತಾನು ಸಾಯಿ ಬಾಬಾನ ಮೂರನೇ ಅವತಾರ ಎಂದು ಜನರನ್ನು ನಂಬಿಸಿ 1.5 ಕೋಟಿ ರುಪಾಯಿ ವಂಚನೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ
ಕಳೆದ ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಅಕಾರಂ ಸರಗಾರ್ ಚನ್ನಪಟ್ಟಣಕ್ಕೆ ಬಂದಿದ್ದ.
ಈ ವೇಳೆ ತಾನು ಸಾಯಿ ಬಾಬಾರ ಮೂರನೇ ಅವತಾರ ಪ್ರೇಮ ಸಾಯಿ ಬಾಬ ಅಂತಾ ಹೇಳಿಕೊಂಡಿದ್ದಾನೆ.

ಇದನ್ನ ನಂಬಿದ ಜನರು ಗ್ರಾಮದಲ್ಲಿ ಉಳಿಯಲು ಜಾಗ ಕೊಟ್ಟಿದ್ದಾರೆ. ಸಿಂಧೂ ಎಂಬುವವರ ತೋಟದ ಮನೆಯಲ್ಲಿ ಪ್ರತಿನಿತ್ಯ ಭಜನೆ, ಪೂಜೆ ಮಾಡಿ ಹಣ ವಸೂಲಿ ಮಾಡಿದ್ದಾನೆ.
ಅಲ್ಲದೇ ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಎಂಬ ಹೆಸರಲ್ಲಿ ಜನರಿಂದ 1.5 ಕೋಟಿ ಸಂಗ್ರಹಿಸಿದ್ದಾನೆ.
ಜೊತೆಗೆ ತೊಟದ ಮನೆಯನ್ನ ತನ್ನ ಹೆಸರಿಗೆ ಬರೆದುಕೊಡು ಅಂತಾ ಸಿಂಧೂ ಅವರಿಗೆ ನಿತ್ಯ ಕಿರುಕುಳ ನೀಡಿದ್ದಾನೆ.
ಇದರಿಂದ ಬೇಸತ್ತ ಮಹಿಳೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಹಣದ ಜೊತೆಗೆ ನಕಲಿ ಬಾಬಾ ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.








