ಈತ ವೈದ್ಯ ಅಲ್ಲ ನಂ. 1 ಫ್ರಾಡ್ : ನಕಲಿ ವೈದ್ಯನ ನಂಬಿ ಮೋಸಹೋದವರೆಷ್ಟು ಮಂದಿ..!
ಈತ ವೈದ್ಯ ಅಲ್ಲ. ವೈದ್ಯನ ರೀತಿ ನಾಟಕವಾಡುತ್ತಾ ರೋಗಿಗಳ ಜೀವನದ ಜೊತೆ ಆಟವಾಡ್ತಿದ್ದ ನಂಬರ್ 1 ಫ್ರಾಡ್. ಹೌದು 10 ರ‍್ಷಗಳ ಕಾಲ ಈತ ವೈದ್ಯನ ಸೋಗಿನಲ್ಲಿ ರೋಗಿಗಳನ್ನ ವಂಚಿಸಿ ಅವರ ಬಳಿ ರಕ್ಷಾಂತರ ರೂಪಾಯಿಗಳನ್ನ ಪೀಕಿದ್ದಾನೆ. 10 ವರ್ಷಗಳ ಬಳಿಕ ಈತನನ್ನ ಪುಣೆ ಪೊಲೀಸರು ಬಂಧಿಸಿದ್ದಾರೆ.
ತನ್ನನ್ನು ತಾನೇ ಡಾ.ದೇಶಪಾಂಡೆ ಅಥವಾ ಡಾ.ಕುಲರ‍್ಣಿ ಎಂದು ಕರೆದುಕೊಂಡು ದುಬಾರಿ ಔಷಧವನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದಾಗಿ ಹೇಳಿ ಸಾವಿರಾರು ರೂಪಾಯಿ ದೋಚುತ್ತಿದ್ದವ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾನೆ. ಜನವರಿ ತಿಂಗಳಲ್ಲಿ ಡಾ.ದೇಶಪಾಂಡೆ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಪುಣೆಯ ಸಸ್ಸೂನ್ ಜನರಲ್ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಕರೆ ಮಾಡಿ ಸ್ಥಳೀಯವಾಗಿ ದೊರಕದ ಇಂಜೆಕ್ಷನ್ ಗಳನ್ನು ತರಿಸುವುದಾಗಿ ಹೇಳಿ ಹಣಪಡೆದಿದ್ದ. ಹೀಗೆ ಒಂದು ದಂಪತಿಯಿಂದ 7 ಸಾವಿರ ರೂಪಾಯಿ, ಮತ್ತೊಬ್ಬ ರೋಗಿಯಿಂದ 20 ಸಾವಿರ ಪಡೆದು ಮಾಯವಾಗಿದ್ದ. ಇತ್ತ ಈತ ನಾಪತ್ತೆಯಾಗಿದ್ದ. ಹಿನ್ನೆಲೆ ದುಡ್ಡು ಕೊಟ್ಟಿದ್ದ ರೋಗಿಗಳು
ಪುಣೆಯ ಬುಂದ್ ಗರ‍್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯ ಪತ್ತೆಯಾಗಿತ್ತು. ಈತನ ಹೆಸರು ಅಮಿತ್ ಕಾಂಬ್ಳೆ.
ಬಳಿಕ ಪೊಲೀಸರು ಆತನನ್ನ ಬಂಧಿಸಿ ಬೆಂಡೆತ್ತಿದಾಗ ಈತ 2010ರಿಂದಲೂ ಇಂತಹದ್ದೇ ಕೆಲಸದಲ್ಲಿ ಭಾಗಿಯಾಗಿರುವ ಅಸಲಿಯತ್ತು ತಿಳಿದಿದೆ. ಈವರೆಗೂ ಈತ 21 ಕ್ಕೂ ಅಧಿಕ ವಂಚನೆ ಪ್ರಕರಣಗಳಲ್ಲಿ ಬಾಗಿಯಾಗಿದ್ದು ಗೊತ್ತಾಗಿದೆ. ಇದೇ ರೀತಿ ನಕಲಿ ವೈದ್ಯನಂತೆ ಎಷ್ಟೋ ಮಂದಿಗೆ ಟೋಪಿ ಹಾಕಿದ್ದಾನೆ. ಇಂಥ ಪ್ರಕರಣವೊಂದರಲ್ಲಿ 2017 ನೇ ಇಸವಿಯಲ್ಲಿ ಒಮ್ಮೆ ಈತ ಬಂಧನಕ್ಕೊಳಗಾಗಿ ಕೆಲಸ ನಿಲ್ಲಿಸಿದ್ದ. ಆದರೆ ಇತ್ತೀಚೆಗೆ ಮತ್ತೆ ಹಳೇ ಚಾಳಿ ಶುರು ಮಾಡಿಕೊಂಡಿದ್ದ. ಇದೀಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ವಿಚಾರಣೆ ವೇಳೆಯಲ್ಲಿ ತಾನು ಗಂಭೀರ ರೋಗದಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗಾಗಿ ಈ ರೀತಿ ಹಣ ಸಂಪಾದಿಸುತ್ತಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel