Fake News : ಸುಳ್ಳು ಸುದ್ದಿ ಹರಡಿದ 747 ವೆಬ್ ಸೈಟ್ 94 ಯುಟ್ಯೂಬ್ ಚಾನೆಲ್ ಗಳು ಬಂದ್
ನವದೆಹಲಿ : ಯೂಟ್ಯೂಬ್ , ಇನ್ಸ್ಟಾ , ಫೇಸ್ ಬುಕ್ ಪೇಜಸ್ ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಕಂಟೆಂಟ್ ಕ್ರಿಯೇಟರ್ ಗಳು ಸಂಪಾದನೆ ಮಾಡ್ತಾರೆ.. ಇದು ಒಂದು ರೀತಿ ಡಿಜಿಟಲ್ ಯುವಾಗಿದೆ.. ಯೂಟ್ಯೂಬ್ ನಿಂದಲೂ ಅನೇಕರು ಈಗಾಗಲೇ ಫೇಮಸ್ ಆಗಿ ಲಕ್ಷಲಕ್ಷ ಸಬ್ಸ್ ಸ್ಕ್ರೈಬರ್ ಗಳನ್ನ ಹೊಂದಿದ್ದಾರೆ.. ಅಂತೆಯೇ ಅನೇಕರು ಯೂಟ್ಯೂಬ್ ನಲ್ಲಿ ಫೇಮಸ್ ಆಗಲೂ ಚಂದಾದಾರರನ್ನ ಪಡೆಯಲು ಸ್ಟ್ರಗಲ್ ಮಾಡ್ತಿದ್ದಾರೆ..
ಇನ್ನೂ ಅನೇಕ ವೆಬ್ ಸೈಟ್ ಗಳಲ್ಲಿ ಯೂಟ್ಯೂಬ್ ಚಾನಲ್ ಗಳಲ್ಲಿ ಸುಖಾ ಸುಮ್ಮನೆ ಸುಳ್ಳು ಸುದ್ದಿಯನ್ನೂ ಹಬ್ಬಿಸುವವರಿದ್ದಾರೆ.. ಇದೇ ರೀತಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 747 ವೆಬ್ ಸೈಟ್ ಗಳು, 94 ಯೂಟ್ಯೂಬ್ ಚಾನೆಲ್ ಹಾಗೂ 19 ಸಾಮಾಜಿಕ ಮಾಧ್ಯಮದ ಖಾತೆಗಳ ಮೇಲೆ ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ನಿರ್ಬಂಧ ಹೇರಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸಂಬಂಧಿತ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಸತ್ಯ ಶೋಧನಾ ಘಟಕವನ್ನು 2020ರ ಮಾರ್ಚ್ 31 ರಂದು ಸ್ಥಾಪಿಸಲಾಗಿದೆ. ಇದು 875 ಸುಳ್ಳು ಸುದ್ದಿ ಹರಡುವ ಪೋಸ್ಟ್‌ಗಳ ಸತ್ಯಾಂಶ ಬಯಲಿಗೆಳೆದಿದೆ ಎಂದು ಅವರು ಆರೋಪಿಸಿದ್ದಾರೆ.








