ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ದೇಹವನ್ನ ದಾನ ಮಾಡಲು ನಿರ್ಧರಿಸಿದ ಕುಟುಂಬಸ್ಥರು..
ಉಕ್ರೇನ್ ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗಿ ಮೃತ ಪಟ್ಟಿರುವ ಕನ್ನಡಿಗ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರ ಮೃತದೇಹ ಸಾವಿಗೀಡಾದ 20 ದಿನಗಳ ಬಳಿಕ ಹುಟ್ಟುರಾದ ಹಾವೇರಿಗೆ ತಲುಪಲಿದೆ.
ತಮ್ಮ ಪುತ್ರನ ಪಾರ್ಥಿವ ಶರೀರವನ್ನ ಹುಟ್ಟೂರಾದ ರಾಣೆಬೆನ್ನೂರು ತಾಲೋಕಿನ ಚಳಗೇರಿಯಲ್ಲಿ ತಲುಪುವ ಕುರಿತು ತಂದೆ ಶೇಖರಪ್ಪ ಅವರು ಮಾಧ್ಯಮಗಳಿಗೆ ಪ್ರತಕ್ರಿಯಿಸಿದ್ದಾರೆ. ಸೋಮವಾರ ಸಂಜೆ ವಿದ್ಯಾರ್ಥಿಯ ಪಾರ್ಥೀವ ಶರೀರ ಬರಲಿದ್ದು ಅಮದು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಿ ನಂತರ ವಿರಶೈವ ಲಿಂಗಾಯತ ಧರ್ಮದಂತೆ ಪೂಜೆ ಸಲ್ಲಿಸಲಾಗುವುದು.
ನವೀನ್ ಗೆ ಡಾಕ್ಟರ್ ಆಗಬೇಕೆಂಬ ಕನಸಿತ್ತು ಹೀಗಾಗಿ ಅವನ ಪಾರ್ಥೀವ ಶರೀರವನ್ನ ದಾವಣೆಗೆರಯ ಎಸ್ ಎಸ್ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ. ತಮ್ಮ ಪುತ್ರನ ದೇಹವನ್ನ ಅಧ್ಯಯನ ಮಾಡುವ ಮೂಲಕ ಆತನ ಆಸೆ ಈಡೇರಲಿ ಎಂದು ತಂದೆ ಅಭಿಪ್ರಾಯ ಪಟ್ಟಿದ್ದಾರೆ.








