ಯುವಕನಿಗೆ ಥಳಿಸಿ, ಚಿತ್ರಹಿಂಸೆಕೊಟ್ಟು ಬೆಟ್ಟದ ಮೇಲಿಂದ ತಳ್ಳಿದ ಯುವತಿ ಕುಟುಂಬಸ್ಥರು…!
ಮಹಾರಾಷ್ಟ್ರ : ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದ 18 ವರ್ಷದ ಯುವಕನನ್ನ , ಆಕೆಯ ಕುಟುಂಬಸ್ಥರು ಹಿಗ್ಗಾಮುಗ್ಗ ಥಳಿಸಿ ಸಿಗರೇಟ್ನಿಂದ ಸುಟ್ಟು ಹಿಂಸೆ ನೀಡಿ ಬೆಟ್ಟದ ಮೇಲಿಂದ ತಳ್ಳಿದ್ದಾರೆ. ಮಹಾರಾಷ್ಟ್ರದ ಮುಂಬ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಯುವಕಿನಿಗೆ ಯುವತಿಯ ಮನೆಯವರು ಸಾಕಷ್ಟು ಬಾರಿ ಆಕೆಯ ಜೊತೆ ಸಂಬಂಧ ಮುಂದುವರೆಸದಂತೆ ವಾರ್ನಿಂಗ್ ಕೊಟ್ಟಿದ್ದರು. ಆದ್ರೂ ಆತ ಮಾತು ಕೇಳದ ಹಿನ್ನೆಲೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಚರ್ಮಕ್ಕೆ ಚರ್ಮ ಸ್ಪರ್ಶವಾಗದೇ ಇದ್ರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದಿದ್ದ ಹೈಕೋರ್ಟ್ : ತೀರ್ಪಿಗೆ ತಡೆ ನೀಡಿದ ‘ಸುಪ್ರೀಂ’
ಆದ್ರೆ ಅದೃಷ್ಟವಶಾತ್ ಯುವಕ ಅಬ್ದುಲ್ ರಹೀಂ ಖಾನ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಡ್ ಮೂಲಕ ಮಾರಣಾಂತಿಕವಾಗಿ ಥಳಿಸಿ, ಜನವರಿ 23ರಂದು ಬೆಟ್ಟದ ಮೇಲಿಂದ ತಳ್ಳಿರುವುದಾಗಿ ಓವೈಸ್ ಅಬ್ದುಲ್ ರಹೀಂ ಖಾನ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ರೈತರ ಟ್ರ್ಯಾಕ್ಟರ್ ಗಲಭೆ ವೇಳೆ ನಡೆದ ಹಿಂಸಾಚಾರ ದುರದೃಷ್ಟಕರ : ಮಾಯಾವತಿ
ತನ್ನ ಸ್ನೇಹಿತರ ನೆರವಿನಿಂದ ಮುಂಬ್ರಾ ಠಾಣೆಗೆ ದೂರು ನೀಡಿದ್ದಾನೆ. ಇದೀಗ ಅಪಹರಣ ಮತ್ತು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪೊಲೀಸರು 30 ಜನರ ವಿರುದ್ಧ FIR ದಾಖಲಿಸಿದ್ದಾರೆ. ಆದರೆ ಈವರೆಗೂ ಯಾರನ್ನೂ ಸಹ ಬಂಧಿಸಿಲ್ಲ ಎನ್ನಲಾಗಿದೆ. ಈ ಪ್ರಕರಣದಲ್ಲಿ ಯುವತಿ ತಂದೆ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








