ಅಕ್ಟೋಬರ್: ಅಪ್ಪು ಇಹಲೋಕ ತ್ಯಜಿಸಿ ಎರಡು ವರ್ಷ ಕಳೆದವು. ಕನ್ನಡಿಗರಿಗೆ ಈ ದಿನ ಕರಾಳ ದಿನವಾಗಿದ್ದು, ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ತಿಥಿ ಕಾರ್ಯಕ್ಕೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು(Appu) ಸ್ಮಾರಕಕ್ಕೆ ಅಭಿಮಾನಿಗಳು ಕೂಡ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
ಪುನೀತ್ ಸಾವಿನ ನೋವಿನ ಭಾರ ಇಂದಿಗೂ ಕಮ್ಮಿಯಾಗಿಲ್ಲ. ಅಪ್ಪು ಪುಣ್ಯ ಸ್ಮರಣೆಗೆ ಅವರ ಅವರ ಇಷ್ಟದ ಖಾದ್ಯಗಳನ್ನು ಇಟ್ಟು ರಾಘಣ್ಣ, ಯುವರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ಮತ್ತು ಮಕ್ಕಳಿಂದ ಪೂಜೆ ಸಲ್ಲಿಸಿದ್ದಾರೆ.
ಅಶ್ವಿನಿ ಪುನೀತ್ ಮತ್ತು ಯುವರಾಜ್ ಕುಮಾರ್ ಅವರು ಅನ್ನಸಂತರ್ಪಣೆ ಮಾಡಿದ್ದಾರೆ. ಧನ್ಯಾ, ಪೂರ್ಣಿಮ, ಅಪ್ಪು ಪುತ್ರಿ, ರಾಘಣ್ಣ ದಂಪತಿ ಸೇರಿದಂತೆ ಇಡೀ ಕುಟುಂಬ ಸಾಥ್ ನೀಡಿದೆ. ಅಭಿಮಾನಿಗಳು ಕೂಡ ಎರಡನೇ ವರ್ಷದ ಪುಣ್ಯಸ್ಮರಣೆಗೆ ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಕೈಗೊಂಡಿದ್ದಾರೆ.








