ಮಂಡ್ಯದ ಗಂಡು ಅಂಬರೀಶ್ ಗೆ ದೇವಾಲಯ ನಿರ್ಮಿಸುತ್ತಿರುವ ಅಭಿಮಾನಿಗಳು Ambarish temple
ಮದ್ದೂರು, ನವೆಂಬರ್23: ನಟರ ಮೇಲೆ ಅವರ ಅಭಿಮಾನಿಗಳು ತಮ್ಮ ಅಭಿಮಾನವನ್ನು ಸಮಾಜ ಕಲ್ಯಾಣ ಕಾರ್ಯಗಳ ಮೂಲಕ, ನಟನ ಜನ್ಮದಿನದ ಸಂಭ್ರಮಾಚರಣೆಯ ಪ್ರಕಾರ ಹೀಗೆ ವಿಧ ವಿಧವಾಗಿ ತೋರುತ್ತಾರೆ. ಕೆಲವೆಡೆ ಅಭಿಮಾನಿಗಳು ಅಭಿಮಾನ ನಟ ನಟಿಯರ ದೇವಾಲಯವನ್ನು ಕೂಡಾ ಕಟ್ಟಿರುವುದನ್ನು ನಾವು ನೋಡಿದ್ದೇವೆ. ಈಗ ಅಂತಹುದೇ ಅಭಿಮಾನವನ್ನು ಅಭಿಮಾನಿಗಳು ಸ್ಯಾಂಡಲ್ವುಡ್ ನಟನ ಮೇಲೆ ತೋರಿದ್ದಾರೆ. Ambarish temple

ಕಲಿಯುಗ ಕರ್ಣ, ಮಂಡ್ಯದ ಗಂಡು, ಅಂಬಿ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಂಡಿರುವ ಅಭಿಮಾನ ಆರಾಧ್ಯ ದೈವ ಅಂಬರೀಶ್ ಅವರ ದೇವಾಲಯ ನಿರ್ಮಾಣವಾಗುತ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ಎಂಟು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ದೇಗುಲದಲ್ಲಿ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಡಾ. ರಾಜ್ ಕುಮಾರ್ ಬಾಲಕೃಷ್ಣ ರವರ ಕಾಲಿಗೆ ಅಡ್ಡ ಬಿದ್ದು ಕ್ಷಮೆಯಾಚಿಸಲು ಕಾರಣವಾದ ಆ ಘಟನೆ
ಇದೇ ತಿಂಗಳ 24 ರಂದು ಈ ದೇವಾಲಯವನ್ನು ಸಂಸದೆ ಸುಮಲತ ಅಂಬರೀಶ್ ಅವರು ಉದ್ಘಾಟನೆ ಮಾಡಲಿದ್ದಾರೆ. ಹಿಂದೆ ಅಂಬರೀಶ್ ಇದ್ದ ಸಮಯದಲ್ಲಿ ಈ ಗ್ರಾಮದ ಜನರು ಅಂಬರೀಶ್ ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮ ಪಡುತ್ತಿದ್ದರು.
ಇದೀಗ ದೈಹಿಕವಾಗಿ ದೂರವಾಗಿದ್ದರೂ ಅಭಿಮಾನಿಗಳ ಮನಸ್ಸಿನಲ್ಲಿ ಆಳವಾಗಿ ನೆಲೆಸಿರುವ ನಟ ಅಂಬರೀಶ್ ಅವರ ನೆನಪಿನಲ್ಲಿ ಅಭಿಮಾನಿಗಳು ದೇವಾಲಯವನ್ನು ನಿರ್ಮಾಣ ಮಾಡಿದ್ದು, ಅವರ ಚಿತಾಭಸ್ಮವನ್ನು ಕೂಡಾ ಇಲ್ಲಿ ಸ್ಥಾಪಿಸಿರುವ ಪುತ್ಥಳಿ ಸ್ಥಳದಲ್ಲಿ ತಂದು ಹಾಕಿದ್ದಾರೆನ್ನಲಾಗಿದೆ.2018 ನವೆಂಬರ್ 24 ರಂದು ಅಂಬರೀಶ್ ಅವರು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದರು.

ಅಂದೇ ಅಂಬರೀಶ್ ಅವರ ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಹೊಟ್ಟೆ ಗೌಡನ ದೊಡ್ಡಿ ಗ್ರಾಮದ ಜನರು ನಿರ್ಧರಿಸಿದ್ದು, ಅದಕ್ಕೆ ಕಾಲ ಈಗ ಕೂಡಿ ಬಂದಿದೆ. ಈ ನವೆಂಬರ್ 24 ರಂದು ಅಂಬರೀಶ್ ಅವರ ದೇವಾಲಯವು ಉದ್ಘಾಟನೆಯಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಬಾರ್ಲಿ ನೀರಿನ 8 ಬೆರಗುಗೊಳಿಸುವ ಆರೋಗ್ಯ ಪ್ರಯೋಜನಗಳುhttps://t.co/4hHrSSIDRn
— Saaksha TV (@SaakshaTv) November 22, 2020
ಕರ್ನಾಟಕದಲ್ಲಿ ಮೊದಲ ಮರುಬಳಕೆಯ ಪ್ಲಾಸ್ಟಿಕ್ ಮನೆhttps://t.co/Bd9SenA8ut
— Saaksha TV (@SaakshaTv) November 22, 2020
ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮೆರೆದ ಪ್ರತಿಭಾವಂತೆ ಅಧ್ಯಯನಾ https://t.co/a6XjI6yXy6
— Saaksha TV (@SaakshaTv) November 22, 2020







