Hardik Pandya | ನೀನು ಮೆಕ್ ಗ್ರಾತ್ ಅಲ್ಲ.. ಹಾರ್ದಿಕ್ ಪಾಂಡ್ಯ ಟ್ರೋಲ್
ಐಪಿಎಲ್ ನ ಹೊಸ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್ ಇತ್ತೀಚೆಗೆ ತನ್ನ ಜೆರ್ಸಿಯನ್ನು ಅನಾವರಣ ಮಾಡಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಗುಜರಾತ್ ಟೈಟಾನ್ಸ್ ತಂಡ ನಾಯಕ ಹಾರ್ದಿಕ್ ಪಾಂಡ್ಯ, ಮುಖ್ಯ ಕೋಚ್ ಆಶಿಶ್ ನೆಹ್ರಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ತಂಡದ ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜೆರ್ಸಿ ಅನಾವರಣ ನಡೆದಿದೆ.
ಈ ವೇಳೆ ಪತ್ರಕರ್ತರೊಬ್ಬರು, ನೀವು ಬೌಲಿಂಗ್ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡ್ಯ, ಅದು ಸರ್ಪ್ರೈಸ್. ಸರ್ಪ್ರೈಸ್ ಆಗೇ ಇರಲಿ ಎಂದಿದ್ದರು.
ಹಾರ್ದಿಕ್ ರ ಈ ಹೇಳಿಕೆ ಇದೀಗ ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿದೆ. ಹಾರ್ದಿಕ್ ಯಾಕೋ ಗ್ರೇಟ್ ಬೌಲರ್ ಆಗಿ ಫೀಲ್ ಆಗುತ್ತಿದ್ದಾರೆ.
ಆಲ್ ರೌಂಡರ್ ಅಂತಾ ಹೇಳಿಕೊಳ್ಳುವ ಹಾರ್ದಿಕ್, ತನ್ನನ್ನ ತಾನು ಬೌಲಿಂಗ್ ದಿಗ್ಗಜ ಗ್ಲೆನ್ ಮೆಕ್ ಗ್ರಾತ್ ಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ.
ನಿಮ್ಮ ಬೌಲಿಂಗ್ ನೋಡಲು ನಮ್ಮಿಂದ ಸಾಧ್ಯವಿಲ್ಲ, ಅದರಲ್ಲಿ ಸರ್ಪ್ರೈಸ್ ಏನಿದೆ…? ಬೌಲಿಂಗ್ ಮಾಡ್ತೀಯಾ ಅಂದ್ರೆ ಮಾಡ್ತೀನಿ ಅಂತಾ ಹೇಳು, ಇಲ್ಲಾ ಮಾಡಲ್ಲ ಅಂತನಾದ್ರೂ ಹೇಳು ಅಂತ ಟ್ರೋಲ್ ಮಾಡುತ್ತಿದ್ದಾರೆ.









