ಚಾಮರಾಜನಗರ: ರೈತರ ಉದ್ಯೋಗ ಕಸಿದರೇ ಸರ್ಕಾರಕ್ಕೆ ಅಟ್ಟಾಡಿಸಿ ಹೊಡಿತೀವಿ ಎಂದು ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಚಾಮರಾಜನಗರದಲ್ಲಿ ಭೂ ಸುಧಾರಣೆ , ವಿದ್ಯುತ್ ಕಾಯ್ದೆಗಳ ಕುರಿತು ಎಪಿಎಂಸಿಯಲ್ಲಿ ರೈತರ ಸಭೆ ನಡೆಸಿದ ಬಳಿಕ ಮಾತನಾಡಿರುವ ಅವರು ರೈತರ ಉದ್ಯೋಗ ಕಸಿಯುವಂತಹ ಕಾನೂನುಗಳನ್ನು ಜಾರಿಗೆ ತಂದರೆ ಸರ್ಕಾರ ನಡೆಸುವವರಿಗೆ ಅಟ್ಟಾಡಿಸಿ ಕೊಂಡು ಹೊಡೆಯ ಬೇಕಾಗುತ್ತದೆ. ಭಾರತದ ಆರ್ಥಿಕತೆ ಕೃಷಿ ಕ್ಷೇತ್ರದ ಮೇಲೆ ನಿಂತಿದೆ. ಕೃಷಿಕರಿಗೆ ಮಾರಕವಾದ, ಅನ್ನದಾತರ ಉದ್ಯೋಗ ಕಸಿಯುವಂತಹ ಕಾನೂನುಗಳನ್ನು ತಂದರೆ ಸರ್ಕಾರ ನಡೆಸುವವರಿಗೆ ಅಟ್ಟಾಡಿಸಿ ಹೊಡೆಯುತ್ತೇವೆ. ರೈತರ ಧ್ವನಿ ಎಂದು ಹೇಳುವ ಯಡಿಯೂರಪ್ಪ ಅವರ ಧ್ವನಿ ಎಲ್ಲಿ ಎಂದು ಕಿಡಿಕಾರಿದ್ದಾರೆ. ಅಲ್ದೇ ಕೊರೋನಾ ಲಾಕ್ಡೌನ್ ಹೊತ್ತಿನಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸುವ ತುರ್ತೇನಿತ್ತು. ಈಗಿನ ಭೂ ಸುಧಾರಣೆ ಕಾಯ್ದೆ ರೈತರಿಗೆ ಬಗೆದ ದ್ರೋಹವಾಗಿದೆ. ಇದರಿಂದ ಸಣ್ಣ ರೈತರು ಬಹಳ ನೋವು ಅನುಭವಿಸಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಭೂ ಸುಧಾರಣೆ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆ ಬಗ್ಗೆ ಇನ್ನು ಕೂಡ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಈ ಕುರಿತು ಜಾಗೃತಿ ಮೂಡಿಸಿ ಹೋರಾಟ ನಡೆಸಲಿದ್ದು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ ಎಂದು ಎಚ್ಚರಿಸಿದ್ದಾರೆ.
ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟಕ್ಕೆ ಮಣಿದ ಸರ್ಕಾರ : ಸಮಿತಿ ರಚನೆಗೆ ಒಪ್ಪಿಗೆ – ಆರ್. ಆಶೋಕ್
ವಕ್ಫ್ ಮಂಡಳಿ ಹಿಂದೂಗಳು ಮತ್ತು ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದೇನೆ. ಈ ಹೋರಾಟದಲ್ಲಿ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರಕಿದೆ....