ಪುತ್ರಿಯ ಆನ್ ಲೈನ್ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್ ಖರೀದಿ ಮಾಡಿದ್ದ ಹಿಮಾಚಲ ಪ್ರದೆಶದ ರೈತ ಕುಲದೀಪ್ ಕುಮಾರ್ ಅವರು ಸದ್ಯ ಇಡೀ ದೇಶಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವರು ಈ ರೈತನ ನೆರವಿಗೆ ದಾವಿಸಿದ್ರು. ಪ್ರಮುಖವಾಗಿ ಬಾಲಿವುಡ್ ನಟ ಸೂನು ಸೂದ್ ಸಹ ಇವರ ನೆರವಿಗೆ ನಿಂತಿದ್ರು. ಆದ್ರೆ ಇದೀಗ ಈ ರೈತನ ಅಸಲಿ ಮುಖವಾಡ ಕಳಚಿ ಬಿದ್ದಿದೆ.
ಕಾಂಗ್ರಾ ಜಿಲ್ಲೆಯ ರೈತ ಕುಲದೀಪ್ ಕುಮಾರ್ ಪುತ್ರಿಯ ಶಿಕ್ಷಣಕ್ಕಾಗಿ ಹಸುವನ್ನು 6 ಸಾವಿರಕ್ಕೆ ಮಾರಿ ಸ್ಮಾರ್ಟ್ ಫೋನ್ ಕೊಡಿಸಿದ್ರು. ಈ ಸುದ್ದಿ ದೆಶಾದ್ಯಂತ ವ್ಯಾಪವಾಗಿ ವೈರಲ್ ಆಗಿತ್ತು. ಆದ್ರೀಗ ಈ ಸುದ್ದಿ ಸುಳ್ಳು ಎಂದು ಸ್ಥಳೀಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದೇಶಾದ್ಯಂತ ವ್ಯಾಪಕವಾಗಿ ಈ ಸುದ್ದಿ ಹಬ್ಬುತ್ತಿಂದಂತೆ ಕಾಂಗ್ರಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮರ್ಪಕ ತನಿಖೆಗೆ ಆಗ್ರಹಿಸಿದ್ರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ರು. ತನಿಖೆಯ ವೇಳೆ ನಿಜಾಂಶ ಬೆಳಕಿಗೆ ಬಂದಿದೆ. ಅಸಲಿಗೆ ಹಸು ಮಾರುವ ಒಂದು ತಿಂಗಳು ಮುನ್ನವೇ ಕುಲದೀಪ್ ಅವರ ಪುತ್ರಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ರಂತೆ. ಇನ್ನೂ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿದ್ದರೂ ದುಬಾರಿ ಶುಲ್ಕದ ಖಾಸಗಿ ಶಾಲೆಗೆ ಪುತ್ರಿಯನ್ನು ಸೇರಿಸಿದ್ರು. ಇನ್ನೂ ಕುಲದೀಪ್ ಬಳಿ 7 ಹಸುಗಳಿದ್ದವು. ಆದರೆ ಅವರ ಕೊಟ್ಟಿಗೆಯಲ್ಲಿ ಜಾಗ ಸಾಲುತ್ತಿರಲಿಲ್ಲ ಹೀಗಾಗಿಯೇ ಒಂದು ಹಸುವನ್ನು ಮಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.
ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...








