ADVERTISEMENT
Sunday, April 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನ್ನದಾತರ ಬಾರುಕೋಲು ಚಳವಳಿ | ರೈತರ ಕಿಚ್ಚಿಗೆ ಸ್ತಬ್ದವಾಗುತ್ತಾ ಸಿಲಿಕಾನ್ ಸಿಟಿ..!

Kariyappa N by Kariyappa N
December 9, 2020
in Newsbeat, Politics, Samagra karnataka
protest
Share on FacebookShare on TwitterShare on WhatsappShare on Telegram

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆಸಿರುವ ಅನ್ನದಾತರು, ಇಂದು ಬಾರುಕೋಲು ಚಳವಳಿ ಮೂಲಕ ರಾಜಧಾನಿ ಬೆಂಗಳೂರಿಗೆ ಲಗ್ಗೆ ಹಾಕಲಿದ್ದಾರೆ.
ನಿನ್ನೆಯಷ್ಟೇ ಭಾರತ್ ಬಂದ್‍ನಲ್ಲಿ ಪಾಲ್ಗೊಂಡಿದ್ದ ರೈತರು, ಇಂದು ಬೆಂಗಳೂರಿನಲ್ಲಿ ಬಾರುಕೋಲು ಚಳವಳಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲಿದ್ದಾರೆ.
ರಾಜ್ಯ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸೇರಿದಂತೆ ರೈತ ಸಂಘಟನೆಗಳ ನೇತೃತ್ವದಲ್ಲಿ ಇಂದು 10 ಸಾವಿರಕ್ಕೂ ಹೆಚ್ಚು ರೈತರು ಸರ್ಕಾರದ ವಿರುದ್ಧ ಬಾರುಕೋಲಿನ ಚಾಟಿಯ ಸದ್ದು ಮೊಳಗಿಸಲಿದ್ದಾರೆ.


ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಬಾರುಕೋಲು ಚಳವಳಿ ನಡೆಸಿ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ.
ಈಗಾಗಲೇ ರೈಲಿನ ಮೂಲಕ ರೈಲ್ವೆ ನಿಲ್ದಾಣಕ್ಕೆ ರೈತರು ಆಗಮಿಸಿದ್ದು, ಕೆಲವೇ ಹೊತ್ತಿನಲ್ಲಿ ರೈತರ ಪಾದಯಾತ್ರೆ ಆರಂಭವಾಗಲಿದೆ.
ರೈಲ್ವೆ ನಿಲ್ದಾಣಕ್ಕೆ ಬಂದ ರೈತರನ್ನು ಹಸಿರು ಶಾಲು ತೆಗೆಯಿರಿ, ಬಾರುಕೋಲು ತೆಗೆಯಿರಿ ಎಂದು ಪೊಲೀಸರು ವಾರ್ನ್ ಮಾಡಿದ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ.
ಪ್ರಮುಖವಾಗಿ ಭೂಸುಧಾರಣಾ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ರೈತರು ನಿತಂತರ ಹೋರಾಟ ನಡೆಸಲಿದ್ದಾರೆ. ಬಾರುಕೋಲು ಚಳವಳಿ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.

Related posts

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

April 12, 2026
ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ   State BJP leaders

ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ State BJP leaders

April 12, 2026

ರೈತರ ಪ್ರತಿಭಟನೆ ಹಿನ್ನೆಲೆ ಪೋಲೀಸರು ಅಲರ್ಟ್..!
ಬೆಂಗಳೂರು ನಗರದ ನಾಲ್ಕು ದಿಕ್ಕುಗಳಿಂದ ರೈತರು ರಾಜಧಾನಿಗೆ ಲಗ್ಗೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ನಿಲ್ದಾಣ, ಫ್ರೀಡಂಪಾರ್ಕ್, ವಿಧಾನಸೌಧ, ರಾಜಭವನಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರೈಲ್ವೆ ನಿಲ್ದಾಣದ ಬಳಿ 500 ಪೊಲೀಸರ ನಿಯೋಜನೆ ಮಾಡಲಾಗಿದ್ದು, ಅನಂದರಾವ್ ವೃತ್ತದ ಬಳಿ 200 ಪೊಲೀಸರು, ಕಾರ್ಪೋರೇಷನ್, ಮೈಸೂರು ಬ್ಯಾಂಕ್ ವೃತ್ತದ ಬಳಿ 800 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

farmers protest
ವಿಧಾನಸೌಧ ಹಾಗೂ ರಾಜಭವನಕ್ಕೆ ರೈತರು ಮುತ್ತಿಗೆ ಹಾಕಲು ಪ್ಯಾಲೇಸ್ ರಸ್ತೆ ಮೂಲಕ ಬರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಣಿ ಕಾಲೇಜು, ಸಿಐಡಿ ಕಚೇರಿ ಬಳಿ ಬ್ಯಾರಿಕೇಡ್ ಹಾಕಲಾಗಿದೆ.

ಟ್ರಾಫಿಕ್ ಜಾಮ್ ಬಿಸಿ
ಕೃಷಿ ಕಾಯ್ದೆಗಳ ವಿರುದ್ಧ ರೈತರು ಶಕ್ತಿಸೌಧಕ್ಕೆ ಮುತ್ತಿಗೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಇಂದು ಸ್ತಬ್ದವಾಗುವ ಸಾಧ್ಯತೆ ಇದೆ. ರೈತರು ಪಾದಯಾತ್ರೆ ನಡೆಸುವ ರಸ್ತೆಗಳ ಮಾರ್ಗವನ್ನು ಪೊಲೀಸರು ಡೈವರ್ಟ್ ಮಾಡಿದ್ದು, ಕೆಲವೆಡೆ ಒನ್‍ವೇ ಮಾಡಲಾಗಿದೆ. ಬೆಂಗಳೂರು ನಗರ ಪ್ರವೇಶ ಮಾಡುವ ಟೋಲ್‍ಗಳಲ್ಲೇ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ರೈತ ಸಂಘಟನೆಗಳಲ್ಲದೆ, ಬಿಬಿಎಂಪಿ ಕಚೇರಿಯಿಂದ ರಾಜಭವನವರೆಗೆ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಜಾಥಾ ನಡೆಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರಕ್ಕೆ ಇಂದು ಅಕ್ಷರಶಃ ಟ್ರಾಫಿಕ್ ಜಾಮ್‍ನ ಬಿಸಿ ತಟ್ಟಲಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bangalorebarukolu movementBJPcentral govtFarmers protestkarnataka govtNarendra modi
ShareTweetSendShare
Join us on:

Related Posts

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

by Shwetha
April 12, 2026
0

ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂಪಾಯಿ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನ ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಿಸಲಾಗಿದೆ. ವಕೀಲ...

ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ   State BJP leaders

ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ State BJP leaders

by Shwetha
April 12, 2026
0

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮೇ ನಾಲ್ಕರಂದು ಹೊರಬೀಳಲಿರುವ ಫಲಿತಾಂಶ ಯಾರ ಪರವಾಗಿಯೇ ಬರಲಿ ಕರ್ನಾಟಕ ಬಿಜೆಪಿಯ ಒಳಮನೆಯಲ್ಲಿ...

ಜನನಾಯಕನ್ ಚಿತ್ರಕ್ಕೆ ಸಂಕಷ್ಟ : ಪೈರಸಿ ಹಾವಳಿ ನಡುವೆ ವಿಜಯ್ ಬೆನ್ನಿಗೆ ನಿಂತ ಅಣ್ಣಾಮಲೈ ನಾನು ಈ ಸಿನಿಮಾ ಥಿಯೇಟರ್ ನಲ್ಲೇ ನೋಡುತ್ತೇನೆ ಎಂದು ಘೋಷಣೆ

ಜನನಾಯಕನ್ ಚಿತ್ರಕ್ಕೆ ಸಂಕಷ್ಟ : ಪೈರಸಿ ಹಾವಳಿ ನಡುವೆ ವಿಜಯ್ ಬೆನ್ನಿಗೆ ನಿಂತ ಅಣ್ಣಾಮಲೈ ನಾನು ಈ ಸಿನಿಮಾ ಥಿಯೇಟರ್ ನಲ್ಲೇ ನೋಡುತ್ತೇನೆ ಎಂದು ಘೋಷಣೆ

by Shwetha
April 12, 2026
0

ಕನ್ನಡದ ಹೆಮ್ಮೆಯ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ದಳಪತಿ ವಿಜಯ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಜನನಾಯಕನ್ ಬಿಡುಗಡೆಗೂ ಮುನ್ನವೇ ದೊಡ್ಡ ಸಂಕಷ್ಟಕ್ಕೆ...

ನುಸುಳುಕೋರರಿಗೆ ಗೇಟ್ ಪಾಸ್ ಪಕ್ಕಾ: ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿ ಗುಡುಗು

ನುಸುಳುಕೋರರಿಗೆ ಗೇಟ್ ಪಾಸ್ ಪಕ್ಕಾ: ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿ ಗುಡುಗು

by Shwetha
April 12, 2026
0

ಪಶ್ಚಿಮ ಬಂಗಾಳದ ಚುನಾವಣಾ ರಾಜಕೀಯದ ಅಖಾಡ ಈಗ ಕಾವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪ್ರಚಾರಕ್ಕೆ ಹೊಸ ವೇಗ ನೀಡಿದ್ದಾರೆ....

ದಾವಣಗೆರೆಯಲ್ಲಿ ಕೈಗೆ ತಪ್ಪಿತೇ ಮುಸ್ಲಿಂ ಮತಗಳ ಸಾಥ್? ಸೋಲಿನ ಭೀತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ದಾವಣಗೆರೆಯಲ್ಲಿ ಕೈಗೆ ತಪ್ಪಿತೇ ಮುಸ್ಲಿಂ ಮತಗಳ ಸಾಥ್? ಸೋಲಿನ ಭೀತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

by Shwetha
April 12, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ಉಪಚುನಾವಣೆಯ ಮತದಾನ ಮುಗಿದಿದ್ದು, ಫಲಿತಾಂಶಕ್ಕಾಗಿ ರಾಜ್ಯ ರಾಜಕೀಯ ವಲಯ ಕಾತರದಿಂದ ಕಾಯುತ್ತಿದೆ. ಈ ನಡುವೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram