farmers : ಕೇಂದ್ರದ ತಾಕತ್ತಿಗೆ ಅನ್ನದಾತರ ಸವಾಲು : ರಾತ್ರೋರಾತ್ರಿ ಸ್ಮಾರಕ ನಿರ್ಮಾಣ
ರಾಜಸ್ಥಾನ : ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಧರಣಿ ಮುಂದುವರಿದಿದ್ದು, ಇದೀಗ ಸರ್ಕಾರಕ್ಕೆ ರೈತರು ಮತ್ತೊಂದು ಸವಾಲ್ ಎಸೆದಿದ್ದಾರೆ.
ರೈತ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಷಹಜಹಾನ್ಪುರ ಗಡಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರೈತರು ಹುತಾತ್ಮರ ಸ್ಮಾರಕವನ್ನು ಅನುಮತಿಯಿಲ್ಲದೆ ರಾತ್ರೋರಾತ್ರಿ ನಿರ್ಮಿಸಿದ್ದಾರೆ.
ಅಲ್ಲದೆ ಸರ್ಕಾರಕ್ಕೆ ಧೈರ್ಯವಿದ್ದರೆ ಹುತಾತ್ಮರು ಸ್ಮಾರಕವನ್ನು ತೆಗೆದು ಹಾಕಲಿ ಎಂದು ಸವಾಲೆಸೆದಿದ್ದಾರೆ.
ಅಂದಹಾಗೆ ದೇಶಾದ್ಯಂತ ವಿವಿಧ ರಾಜ್ಯಗಳಿಂದ ಮಣ್ಣು ಮತ್ತು ಚಿತಾಭಸ್ಮ ಸಂಗ್ರಹಿಸಿ ಸ್ಮಾರಕ ಸಂಗ್ರಹಿಸಿದ್ದಾರೆ.
