ಮಂಗಳೂರು : ಎಪಿಎಂಸಿ ಕಾಯ್ದೆಯಿಂದ ರೈತರ ಉತ್ಪನ್ನಗಳಿಗೆ ನಿಶ್ಚಿತ ಲಾಭ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಬಹುದಾಗಿದೆ.
ಕನಿಷ್ಟ ಬೆಂಬಲ ಬೆಲೆ ಮುಂದುವರೆಯಲಿದ್ದು ರೈತರು ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿ ತಮ್ಮ ಇಚ್ಛಿತ ಬೆಲೆಯನ್ನು ಪಡೆಯಬಹುದಾಗಿದೆ.
ಬೆಳೆ ಖರೀದಿಸುವ ಬಂಡವಾಳಶಾಯಿಗಳು ಅಗತ್ಯವಿರುವ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಬೇಕು.
ರೈತರಿಗೆ ಸೂಕ್ತ ತಾಂತ್ರಿಕ ಸಲಹೆ, ಬೆಳೆನಾಶವಾದ್ದಲ್ಲಿ ಪೂರ್ಣ, ಭಾಗಶ: ನಷ್ಟ ಭರಿಸುವ ಜವಾಬ್ದಾರಿಯೂ ಬಂಡವಾಳಶಾಯಿಗಳ ಮೇಲೆ ಇರುತ್ತದೆ.
ಎಪಿಎಂಸಿಯಲ್ಲದೇ ಬೇರೆ ಕಡೆ ರೈತರ ವ್ಯಾಪಾರಕ್ಕೂ ಈ ಕಾಯ್ದೆಯಿಂದ ರಕ್ಷಣೆ ಸಿಗುವುದಲ್ಲದೇ ರೈತರ ಉತ್ಪನ್ನಗಳಿಗೆ ನಿಶ್ಚಿತ ಲಾಭ ಸಿಗಲು ಕೇಂದ್ರ ಸರಕಾರ ಈ ರೈತಪರ ಕಾಯ್ದೆ ಜಾರಿಗೆ ತಂದಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ರೈತರಿಗೆ ಮೋಸವೆಸಗುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ವಿಪಕ್ಷಗಳು ಈ ರೈತಪರ ಕಾಯ್ದೆಯನ್ನು ವಿರೋಧಿಸುತ್ತವೆ ಎಂದು ಕಿಡಿಕಾರಿದ್ದಾರೆ.








