ಪಂಜಾಬನಲ್ಲಿ ಮೋದಿಗೆ ರೈತರ ಪ್ರತಿಭಟನೆ ಬಿಸಿ ತಟ್ಟಿದೆ: ಕೋಡಿಹಳ್ಳಿ ಚಂದ್ರಶೇಖರ್
ಕೋಲಾರ: ನಿನ್ನೆ ಪ್ರಧಾನಿ ಮೋದಿ ಪಂಜಾಬಿನಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳುವಾಗ ಕೆಲವರಿಂದ ಪ್ರತಿಭಟನೆ ನಡೆದಿದ್ದು, ಇದರಿಂದ ಪ್ರಧಾನಿ 15-20 ನಿಮಿಷ ಪ್ಲೈಓವರ್ ಮೇಲೆ ನಿಲ್ಲಬೇಕಾಯಿತು. ಈ ಕುರಿತು ಇಂದು ನಗರದಲ್ಲಿ ಪ್ರತಿಕ್ರಯಿಸಿದ ರೈತ ಮುಖಂಡ ಕೋಡಿಹಳಳ್ಳಿ ಚಂದ್ರಶೇಖರ್ ನಿನ್ನೆ ಪಂಜಾಬನಲ್ಲಿ ಪ್ರದಾನಿ ಮೋದಿಯವರಿಗೆ ರೈತರ ಪ್ರತಿಭಟನೆ ಬಿಸಿ ತಟ್ಟಿದೆ ಎಂದು ಹೇಳಿದರು.
ಅಲ್ಲದೇ ಬಿಜೆಪಿಯವರು ಒಂದು ರಾಜ್ಯದ ಮೇಲೆ ಗುರುತರವಾದ ಅರೋಪ ಮಾಡುತ್ತಿದ್ದಾರೆ. ರೈತರು ಖಲಿಸ್ಥಾನಿಗಳು, ಉಗ್ರಗಾಮಿಗಳ ಬೆಂಬಲ ಇದೆ ಎಂದು ಬಿಜೆಪಿಯವರು ದೂರುತ್ತಿರುವುದು ಸರಿಯಲ್ಲ. ನಾವು ಮಾಡದ ತಪ್ಪನ್ನು ನಮ್ಮ ಮೇಲೆ ಹೊರೆಸಿದ್ದಾರೆ. ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜ ಕಿತ್ತಾಕಿದ ನಿಂದನೆಯನ್ನು ಹೊರಿಸಿದ್ದು, ಇಂತಹ ಸಂದರ್ಭದಲ್ಲಿ ಪದೆ ಪದೆ ಬಿಜೆಪಯವರು ಅರೋಪ ಮಾಡುತ್ತಲೆ ಇರುತ್ತಾರೆಂದು, ಆಕ್ರೋಶ ಹೊರ ಹಾಕಿದರು.
ಪ್ರದಾನಿ ಮೋದಿಯವರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿರುವುದು ಸಂತೋಷದ ವಿಷಯ. ಆದರೆ ರಾಜ್ಯ ಸರಕಾರ ವಾಪಸ್ ಪಡೆದಿಲ್ಲ. ಮುಖ್ಯಮಂತ್ರಿಗಳು ಅದಿವೇಶನ ಮಾಡಿ ಚರ್ಚೆ ಮಾಡಿ ವಾಪಸ್ ಪಡೆಯಬೇಕು. 1962 ರಿಂದಲೂ ಇರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆ ಗಳನ್ನ ಜಾರಿ ಮಾಡಿ, ಕೃಷಿಯನ್ನ ಅತಂತ್ರ ಪರಿಸ್ಥಿತಿಗೆ ತಳ್ಳುವುದು ಇದರ ಮುಖ್ಯ ಉದ್ದೇಶವಾಗಿರಬಹುದು ಎಂದು ಮಾತನಾಡಿದರು.