ದೆಹಲಿಯಲ್ಲಿ ರೈತರ ಪ್ರತಿಭಟನೆ : ನಿತ್ಯ 3,500 ಕೋಟಿ ನಷ್ಟ
ನವದೆಹಲಿ : ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ವ್ಯಾಪಾರ ವಹಿವಾಟು ನಲುಗಿ ಹೋಗಿದೆ. ಪರಿಣಾಮ ನಿತ್ಯ 3500 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರ ರಾಜಧಾನಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 20ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರದೇಶದಲ್ಲಿ ಸಂಚಾರ ಅಡೆತಡೆಯಿಂದಾಗಿ ನಿತ್ಯ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ಹೊಡೆತವಾಗುತ್ತಿದೆ.
ರೈತರ ಮುಷ್ಕರದಿಂದಾಗಿ ಮೌಲ್ಯಯುತ ಸರಪಳಿ ಮತ್ತು ಸಾರಿಗೆ ಅಡ್ಡಿಗಳಿಂದ ಈ ಪ್ರದೇಶದ ಆರ್ಥಿಕತೆಗೆ ನಿತ್ಯ 3,000- 3,500 ಕೋಟಿ ರೂ.ಯಷ್ಟು ನಷ್ಟ ಉಂಟಾಗುತ್ತಿದೆ ಎಂದು ಎಂದು ಅಸ್ಸೋಚಾಮ್ ಅಂದಾಜಿಸಿದೆ.
ಪ್ರವಾಸೋದ್ಯಮ, ವ್ಯಾಪಾರ, ಸಾರಿಗೆ ಮತ್ತು ಆತಿಥ್ಯ ಸೇರಿ ಇತರೆ ಸೇವಾ ಕ್ಷೇತ್ರಗಳು ಪ್ರತಿಭಟನೆಯ ಪ್ರತಿಕೂಲ ಪ್ರಭಾವಕ್ಕೆ ಒಳಗಾಗಿವೆ.
ಇದನ್ನೂ ಓದಿ : ಹೆಂಡತಿ ಹುಡುಗಾಟಕ್ಕೆ ಬಲಿಯಾದ ಪತಿ: ಅಸಲಿಗೆ ಆಗಿದ್ದೇನು..!
ರಸ್ತೆ, ಟೋಲ್ ಪ್ಲಾಜಾ ಮತ್ತು ರೈಲ್ವೆಗಳ ದಿಗ್ಬಂಧನದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅಸ್ಸೋಚಾಮ್ ಅಧ್ಯಕ್ಷ ನಿರಂಜನ್ ಹಿರಾನಂದಾನಿ ತಿಳಿಸಿದ್ದಾರೆ.
ಅಲ್ಲದೆ ರಫ್ತು ಮಾರುಕಟ್ಟೆ ಪೂರೈಸುವ ಜವಳಿ, ವಾಹನ ಯೂನಿಟ್, ಬೈಸಿಕಲ್ ಮತ್ತು ಕ್ರೀಡಾ ಸಾಮಗ್ರಿಗಳಂತಹ ಕೈಗಾರಿಕೆಗಳು ಕ್ರಿಸ್‍ಮಸ್‍ಗೆ ಮುಂಚಿತವಾಗಿ ಪಡೆದ ಆರ್ಡರ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ಜಾಗತಿಕ ಅಭಿಯಾನಕ್ಕೆ ಧಕ್ಕೆ ತರುತ್ತದೆ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel