ವಿಟ್ಲದ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಿದ್ದ ಬಸ್ ಮುಂದಕ್ಕೆ ಚಲಿಸಿ ಚರಂಡಿಗೆ ವಾಲಿ ನಿಂತ ಘಟನೆಯೊಂದು ಸಂಭವಿಸಿದೆ.
ಬಸ್ ನಿರ್ವಾಹಕ ವಿಟ್ಲದ ಕಾಸರಗೋಡು ರಸ್ತೆಯ ಎಂ.ಆರ್ ನಾಯಕ್ ಪೆಟ್ರೋಲ್ ಪಂಪ್ ನಲ್ಲಿ ಎಂದಿನಂತೆ ಬಸ್ಸನ್ನು ನಿಲ್ಲಿಸಿ ತೊಳೆಯುತ್ತಿದ್ದ. ದಿಢೀರನೆ ನ್ಯೂಟ್ರಲ್ ನಲ್ಲಿ ಮುಂದಕ್ಕೆ ಚಲಿಸಲಾರಂಭಿಸಿದ ಬಸ್ ರಸ್ತೆಯನ್ನು ದಾಟಿ ಪಕ್ಕದ ಚರಂಡಿಗೆ ವಾಲಿ ನಿಂತಿತು.
ತಾಂತ್ರಿಕ ದೋಷದಿಂದಾಗಿ ಈ ಅವಘಡ ಸಂಭವಿಸಿದ್ದು,
ಕಾಸರಗೋಡು ರಸ್ತೆ ಮಧ್ಯದಲ್ಲಿ ಬಸ್ ಅಡ್ಡವಾಗಿ ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ಭೇಟಿ ನೀಡಿದ ವಿಟ್ಲ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.









