FASTaag ಸ್ಕಾನ್ ಆಗದಕ್ಕೆ ದುಪಟ್ಟು ಹಣಕ್ಕೆ ಬೇಡಿಕೆ : ಲಾರಿ ಚಾಲಕರ ಗಲಾಟೆ
ಬೆಳಗಾವಿ : ಇಂದಿನಿಂದ ಟೋಲ್ ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯ ಜಾರಿ ಹಿನ್ನೆಲೆ ಬೆಳಗಾವಿಯಲ್ಲಿ ಫಾಸ್ಟಟ್ಯಾಗ್ ವಿಚಾರವಾಗಿ ಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ವಾಗ್ವಾದ ನಡೆಯುತ್ತಿರುವುದು ಸಾಮ್ಯವಾಗಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಲಾರಿ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.
ಲಾರಿಗೆ ಹಚ್ಚಿದ ಫಾಸ್ಟ್‌ಟ್ಯಾಗ್ ಬ್ಲ್ಯಾಕ್ ಲಿಸ್ಟ್ ಆದ ಹಿನ್ನೆಲೆ ಫಾಸ್ಟ್ ಸ್ಟ್ಯಾಗ್ ಸ್ಕ್ಯಾನ್ ಆಗದ್ದಕ್ಕೆ ದುಪ್ಪಟ್ಟು ಟೋಲ್ ಫೀ ತುಂಬಲು ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡು ಟೋಲ್ ಸಿಬ್ಬಂದಿ ಜೊತೆ ಚಾಲಕರು ವಾಗ್ವಾದ ನಡೆಸಿದ್ದಾರೆ. ಮತ್ತೊಂದೆಡೆ ಫಾಸ್ಟ್ ಟ್ಯಾಗ್ ನಲ್ಲಿ ಹಣ ಇದ್ರೂ ಸ್ಕ್ಯಾನ್ ಆಗ್ತಿಲ್ಲ ಎಂದು ಆರೋಪ ಮಾಡ್ತಿದ್ದಾರೆ ಚಾಲಕರು.
ಟೋಲ್ ಗಳಲ್ಲಿ ಚಾಲಕರು – ಟೋಲ್ ಸಿಬ್ಬಂದಿ ನಡುವೆ ವಾಗ್ವಾದ..!
ಹಿಂದಿನ ಟೋಲ್‌ಗಳಲ್ಲಿ ಸಿಂಗಲ್ ಫೇರ್ ನೀಡಿದ್ದೀವಿ ಈಗ ದುಪ್ಪಟ್ಟು ಹಣ ನೀಡಲಾಗಲ್ಲ ಎಂದು ಲಾರಿ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ತುಮಕೂರಿನಿಂದ ಮುಂಬೈಗೆ ತೆರಳುತ್ತಿದ್ದ ಲಾರಿ ಚಾಲಕರು ಟೋಲ್ ಸಿಬ್ಬಂದಿ ಜೊತೆಗೆ ಗಲಾಟೆ ಮಾಡಿದ್ದಾರೆ. ಇತ್ತ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ಪಟ್ಟಿದ್ದಾರೆ.








