ವಿಮಾನ ನಿಲ್ದಾಣ, ಮಾಲ್ಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಾವತಿಸಲು ಇನ್ನು ಫಾಸ್ಟ್ಟ್ಯಾಗ್
ಹೊಸದಿಲ್ಲಿ, ಜುಲೈ 16: ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನ ಮಾಲ್ಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಖಾಸಗಿ ವಾಹನ ನಿಲುಗಡೆ ಸ್ಥಳಗಳಲ್ಲಿ ಕಾರ್ ಪಾರ್ಕಿಂಗ್ ಸೌಲಭ್ಯಕ್ಕಾಗಿ ಫಾಸ್ಟ್ಟ್ಯಾಗ್ಗಳನ್ನು ಬಳಸುವುದಕ್ಕಾಗಿ ಇಂಟರ್ಪೋರೆಬಲ್ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಮಂಗಳವಾರ ತಿಳಿಸಿದೆ.
ಐಸಿಐಸಿಐ ಬ್ಯಾನ್ ಸೇರಿದಂತೆ 10 ಬ್ಯಾಂಕುಗಳ ಸಹಭಾಗಿತ್ವದಲ್ಲಿ ಜಿಎಂಆರ್ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಸಂಪರ್ಕವಿಲ್ಲದ ಪಾವತಿ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಚಿಲ್ಲರೆ ಪಾವತಿ ಸಂಸ್ಥೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಇತರ ವಿತರಕ ಬ್ಯಾಂಕುಗಳು ಈ ಸೌಲಭ್ಯವನ್ನು ಸಕ್ರಿಯಗೊಳಿಸಲಿವೆ ಎಂದು ಎನ್ಪಿಸಿಐ ತಿಳಿಸಿದೆ.

ಎನ್ಪಿಸಿಐ (ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್) ಫಾಸ್ಟ್ಟ್ಯಾಗ್ ಚಾಲಿತ ಕಾಂಟ್ಯಾಕ್ಟ್ಲೆಸ್ ಕಾರ್ ಪಾರ್ಕಿಂಗ್ ಪರಿಹಾರಗಳಿಗಾಗಿ ಚೆನ್ನೈ ಮತ್ತು ಬೆಂಗಳೂರಿನ ಪ್ರಮುಖ ಮಾಲ್ಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಖಾಸಗಿ ವಾಹನ ನಿಲುಗಡೆ ಸ್ಥಳಗಳೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ.
ಪಾರ್ಕಿಂಗ್ ಪ್ಲಾಜಾದಲ್ಲಿ ಪಾರ್ಕಿಂಗ್ ಸುರಕ್ಷಿತಗೊಳಿಸಲು ಪೋಸ್ಟ್-ಪೇಯ್ಡ್ ಮತ್ತು ಪ್ರಿ-ಪೇಯ್ಡ್ ಪರಿಹಾರವಾಗಿ ಎನ್ಇಟಿಸಿ ಫಾಸ್ಟ್ಯಾಗ್ ಕಾರ್ಯನಿರ್ವಹಿಸುತ್ತದೆ. ಟ್ಯಾಗ್ನ ಒಂದು-ಬಾರಿ ಖರೀದಿ ವೆಚ್ಚವನ್ನು ಹೊರತುಪಡಿಸಿ, ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿರುವುದಿಲ್ಲ.
ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮೆಟ್ರೊ ನಗರಗಳಲ್ಲಿ ಈ ಅನನ್ಯ ಸಂಪರ್ಕವಿಲ್ಲದ ಪಾರ್ಕಿಂಗ್ ಪ್ರಸ್ತಾಪವನ್ನು ತೆಗೆದುಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ. ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ 100% ಸಂಪರ್ಕವಿಲ್ಲದ ಪಾವತಿ ಪರಿಹಾರವು ಅಗತ್ಯವಾಗಿರುತ್ತದೆ ಎಂದು ಎನ್ಪಿಸಿಐ ಸಿಒಒ ಪ್ರವೀನಾ ರೈ ಹೇಳಿದರು.
ಸಾಮಾನ್ಯವಾಗಿ ವಾಹನದ ವಿಂಡ್ಸ್ಕ್ರೀನ್ಗೆ ಅಂಟಿಕೊಂಡಿರುವ ಫಾಸ್ಟ್ಟ್ಯಾಗ್ ಕೇವಲ ಕ್ಷಣಿಕ ನಿಧಾನಗತಿಯೊಂದಿಗೆ ಟೋಲ್ ( ಈಗ ಪಾರ್ಕಿಂಗ್ ಶುಲ್ಕ) ಪಾವತಿಸಲು ಅನುವು ಮಾಡಿಕೊಡುತ್ತದೆ. ವಾಹನವು ಟೋಲ್ ಪ್ಲಾಜಾವನ್ನು ತಲುಪಿದಾಗ, ಟ್ಯಾಗ್ನಲ್ಲಿರುವ ಚಿಪ್ ಅನ್ನು ಪತ್ತೆ ಮಾಡುತ್ತಾರೆ ಮತ್ತು ಟಾಸ್ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಅಥವಾ ಫಾಸ್ಟ್ಯಾಗ್ಗೆ ಲಿಂಕ್ ಮಾಡಲಾದ ಪ್ರಿಪೇಯ್ಡ್ ವ್ಯಾಲೆಟ್ನಿಂದ ಕಡಿತಗೊಳಿಸುತ್ತಾರೆ. ಈ ಟ್ಯಾಗ್ಗಳನ್ನು ಬ್ಯಾಂಕ್ ಖಾತೆಗಳು ಅಥವಾ ಪ್ರಿಪೇಯ್ಡ್ ವ್ಯಾಲೆಟ್ಗಳು ಅಥವಾ ಯುಪಿಐ ಆಧಾರಿತ ಖಾತೆಗಳಿಗೆ ಲಿಂಕ್ ಮಾಡಬಹುದು.
ಕೇಂದ್ರ ಸರ್ಕಾರದ ಉಪಕ್ರಮವಾದ ಫಾಸ್ಟ್ಟ್ಯಾಗ್ಗಳನ್ನು ಟೋಲ್ ಪ್ಲಾಜಾಗಳು, ಪ್ರಮಾಣೀಕೃತ ಬ್ಯಾಂಕುಗಳಲ್ಲಿ ಮತ್ತು ಅಮೆಜಾನ್ ಅಥವಾ ಪೇಟಿಎಂನಂತಹ ಇ-ಕಾಮರ್ಸ್ ವೆಬ್ಸೈಟ್ನಿಂದ ಖರೀದಿಸಬಹುದು








