ಹುಬ್ಬಳ್ಳಿ: ಕಾರು (Omni Car) ಹಾಗೂ ಲಾರಿ (Lorry) ಮಧ್ಯೆ ಭೀಕರ ಅಪಘಾತ ಸಂಭವಿಸಿರುವ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಕಿರೆಸೂರು ಹತ್ತಿರ ನಡೆದಿದೆ. ಅಲ್ಲದೇ, ಈ ಘಟನೆಯಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಜಾಫರ್‌ಸಾಬ್ ಮಂಗಳೂರು (60), ಮಹ್ಮದ್ ಮುಸ್ತಫಾ ಮಂಗಳೂರು (36), ಶೋಹೆಬ್ ಮಂಗಳೂರು (6) ಸಾವನ್ನಪ್ಪಿರುವ ದುರ್ದೈವಿಗಳು.
ಸಾವನ್ನಪ್ಪಿದವರು ಕೊಪ್ಪಳ (Koppal) ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳು. ಮೃತ ಜಾಫರಸಾಬ್ ತಮ್ಮ ಕುಟುಂಬದೊಂದಿಗೆ ಪಾರ್ಶ್ವವಾಯು ಔಷಧಿ ತರಲು ಕಾರವಾರ ಜಿಲ್ಲೆಯ ಹಲಗಾ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಔಷಧಿ ಪಡೆದ ನಂತರ ಮರಳಿ ಊರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.