ಎಫ್‌ಎಟಿಎಫ್ ಅಧ್ಯಕ್ಷ ಸ್ಥಾನ ಚೀನಾದಿಂದ ಜರ್ಮನಿಗೆ – ಆತಂಕದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ FATF presidency germany
ಇಸ್ಲಾಮಾಬಾದ್, ಅಕ್ಟೋಬರ್17: ಜರ್ಮನಿಯ ಮಾರ್ಕಸ್ ಪ್ಲಿಯರ್, ಎಫ್‌ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಅಧ್ಯಕ್ಷರಾಗಿರುವುದರಿಂದ, ಈಗಾಗಲೇ ಬೂದು ಪಟ್ಟಿಯಲ್ಲಿರುವ ಪಾಕಿಸ್ತಾನಕ್ಕೆ ಕಠಿಣವಾಗಬಹುದು ಎಂದು ಹೇಳಲಾಗಿದೆ. FATF presidency germany

ಇಸ್ಲಾಮಾಬಾದ್ ಈಗ ಕಟ್ಟುನಿಟ್ಟಿನ ಪರಿಶೀಲನೆಯನ್ನು ಎದುರಿಸಲಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವರ್ಷಕ್ಕಿಂತ ಮೊದಲು ಎಫ್‌ಎಟಿಎಫ್ ತಂಡದ ಆನ್-ಸೈಟ್ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ದೇಶವು ಸ್ವಲ್ಪ ಸಮಯದವರೆಗೆ ಬೂದು ಪಟ್ಟಿಯಲ್ಲಿ ಉಳಿಯುತ್ತದೆ ಎಂದು ವರದಿಗಳು ತಿಳಿಸಿವೆ.
ಈ ವರ್ಷದ ಜುಲೈ 1 ರಂದು ಪೀಪರ್ಸ್ ಬ್ಯಾಂಕ್ ಆಫ್ ಚೀನಾದ ಕಾನೂನು ವಿಭಾಗದ ಮಹಾನಿರ್ದೇಶಕ ಕ್ಸಿಯಾಂಗ್ಮಿನ್ ಲಿಯು ಅವರಿಂದ ಪ್ಲಿಯರ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಜರ್ಮನಿ ಬೂದು ಪಟ್ಟಿಯಿಂದ ಪಾಕ್ ಅನ್ನು ಹೊರಕ್ಕಿಡಬೇಕೆ, ಬೇಡವೇ ಎಂಬ ತೀರ್ಮಾನ ಕೈಗೊಳ್ಳಲಿರುವ ಕಾರಣ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ.
ಭಾರತದ ಆರ್ಥಿಕತೆ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ – ಐಎಂಎಫ್ ಪ್ರತಿಪಾದನೆ
ಪಾಕ್ 27 ಷರತ್ತುಗಳಲ್ಲಿ 13 ಷರತ್ತುಗಳನ್ನು ಬಾಕಿ ಉಳಿಸಿ ಅದನ್ನು ಪೂರ್ಣ ಗೊಳಿಸಲು ನಾಲ್ಕು ತಿಂಗಳ ಅವಧಿಯನ್ನು ಹೆಚ್ಚುವರಿಯಾಗಿ ಪಡೆದಿದೆ. ಒಂದು ವೇಳೆ ಪಾಕಿಸ್ತಾನವು ಆ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿದ್ದರೆ ಅದನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಪ್ರಸ್ತುತ ಎಫ್‌ಎಟಿಎಫ್‌ನಿಂದ ಕಪ್ಪುಪಟ್ಟಿಗೆ ಇರಾನ್ ಮತ್ತು ಉತ್ತರ ಕೊರಿಯಾ ಸೇರ್ಪಡೆಗೊಂಡಿದೆ.
ಮಿತ್ರರಾಷ್ಟ್ರವಾದ ಚೀನಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರಿಂದ ಪಾಕಿಸ್ತಾನವು ಇಲ್ಲಿಯವರೆಗೆ ಹೆಚ್ಚುವರಿ ಸಮಯವನ್ನು ಪಡೆದಿತ್ತು. ಕಪ್ಪುಪಟ್ಟಿಗೆ ಸೇರಿಸಲ್ಪಟ್ಟರೆ ದೇಶವು ಎದುರಿಸಬೇಕಾದ ಗಂಭೀರ ಪರಿಣಾಮಗಳನ್ನು ಇಮ್ರಾನ್ ಖಾನ್ ತಿಳಿದಿದ್ದಾರೆ.

ನಿಧಾನಗತಿಯ ಆರ್ಥಿಕ ಬೆಳವಣಿಗೆಯೊಂದಿಗೆ ಪಾಕ್ ಆರ್ಥಿಕತೆಯು ಜರ್ಜರಿತವಾಗಿದೆ. ಬೂದು ಪಟ್ಟಿ ಸ್ಥಾನಮಾನದಿಂದಾಗಿ ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ, ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳಿಂದ ಹಣಕಾಸಿನ ನೆರವು ಪಡೆಯುವುದು ಪಾಕಿಸ್ತಾನಕ್ಕೆ ಈಗಾಗಲೇ ಕಷ್ಟವಾಗಿದೆ.
ಆದರೆ ಒಂದು ದೇಶ ಕಪ್ಪುಪಟ್ಟಿಗೆ ಸೇರಿದರೆ ಅದರ ಪರಿಣಾಮಗಳು ಮತ್ತಷ್ಟು ಕೆಟ್ಟದಾಗಿರುತ್ತದೆ.
ಆಗಸ್ಟ್ ನಲ್ಲಿ ಸಂದರ್ಶನವೊಂದರಲ್ಲಿ, ಖಾನ್ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಇರಾನ್ ನಂತೆಯೇ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಅತ್ತೆ ಮಾವನ ಮನೆಯಲ್ಲಿ ಸೊಸೆಗೆ ವಾಸಿಸುವ ಹಕ್ಕಿದೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ವಿಶ್ವಬ್ಯಾಂಕ್ ಪ್ರಕಾರ, ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ 2018 ರಲ್ಲಿ ಶೇಕಡಾ 5.83 ರಷ್ಟಿತ್ತು. ಇದು 2019 ರಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ. 2018 ರಿಂದ ಇದು ಶೇಕಡಾ 4.8 ಕ್ಕಿಂತಲೂ ಕಡಿಮೆಯಾಗಿದೆ. ಇದು ನಿರುದ್ಯೋಗ ಹೆಚ್ಚಳಕ್ಕೆ ಮತ್ತು ಅಶಾಂತಿಗೆ ಕಾರಣವಾಗಿದೆ.
ಪಾಕಿಸ್ತಾನವು ಇಲ್ಲಿಯವರೆಗೆ ಚೀನಾದ ಬೆಂಬಲವನ್ನು ಅನುಭವಿಸುತ್ತಿತ್ತು ಮತ್ತು ಷರತ್ತುಗಳನ್ನು ಪೂರ್ಣಗೊಳಿಸಲು ಅಕ್ಟೋಬರ್ 2019 ರಿಂದ ಎರಡು ಬಾರಿ ವಿಸ್ತರಣೆಗಳನ್ನು ಪಡೆಯಿತು.
ದೇಶದಲ್ಲಿ ಹವಾನಿಯಂತ್ರಣಗಳ (ಎಸಿ) ಅಮದು ನಿಷೇಧಿಸಿದ ಕೇಂದ್ರ ಸರ್ಕಾರ
ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಅಮೆರಿಕ ಮುಂದಾಗಿದೆ. ಭಾರತವೂ ಅದೇ ನಿರ್ಧಾರವನ್ನು ಪ್ರತಿಪಾದಿಸಿದೆ. ಆದರೆ ಎಫ್‌ಎಟಿಎಫ್ ಅನೇಕ ಸದಸ್ಯರನ್ನು ಹೊಂದಿರುವ ವೇದಿಕೆಯಾಗಿದೆ. ಯಾವುದೇ ಕಾರಣವಿಲ್ಲದೆ ಒಂದು ದೇಶವು ಮತ್ತೊಂದು ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಪ್ಯಾರಿಸ್ ಪ್ರಧಾನ ಕಚೇರಿಯನ್ನು ಹೊಂದಿರುವ ಎಫ್‌ಎಟಿಎಫ್ ಆಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು, ಇತರ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ಮೇಲೆ ಕಣ್ಣಿಡುವ ಹಣಕಾಸು ನಿಗಾ ಕಾರ್ಯಪಡೆ. ಆಕ್ರಮ ಹಣ ವರ್ಗಾವಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಪರಿಹರಿಸಲು ಇದು ನೀತಿಗಳನ್ನು ರೂಪಿಸುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








