ರಾಷ್ಟ್ರ ರಾಜಧಾನಿಯಲ್ಲಿ ಇದೆಂಥ ಕೃತ್ಯ : 4ರ ಕಂದಮ್ಮನ ಮೇಲೆ ತಂದೆಯಿಂದಲೇ ಅತ್ಯಾಚಾರ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಕೃತಕಾಮಿ, ನೀಚ ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೆಹಲಿಯ ಪ್ರಹ್ಲಾದ್ ಪುರದಲ್ಲಿ ಈ ಘಟನೆ ನಡೆದಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಳ್ಳಿಫೈಟ್ | ಮಾವಿನಕುರ್ವೆ ಪಂಚಾಯತಿಗೆ ಬಿಜೆಪಿ ಬೆಂಬಲಿತರ ತೆಕ್ಕೆಗೆ..!
ಈ ದುಷ್ಕøತ್ಯದ ಬಗ್ಗೆ ದೂರು ನೀಡಲು ಹೊರಟಿದ್ದ ಪತ್ನಿ ಮೇಲೆ ಆರೋಪಿ ಪತಿ ಹಲ್ಲೆ ನಡೆಸಿ ತಡೆದಿದ್ದನು. ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನಂತೆ.
ಇದರಿಂದ ದೂರು ನೀಡದೇ ಹಿಂದುರುಗಿದ್ದ ಬಾಲಕಿಯ ತಾಯಿ, ಸಂತ್ರಸ್ತ ಬಾಲಕಿಯನ್ನು ಹರಸಾಹಸ ಮಾಡಿ ತಾಯಿ ತನ್ನ ತವರು ಮನೆಗೆ ಕಳುಹಿಸಿದ್ದಳು.
ಅಲ್ಲದೆ ತನ್ನ ಪತಿಯ ಕೃತ್ಯದ ಬಗ್ಗೆ ತಾಯಿಗೆ ತಿಳಿಸಿದ್ದು, ಬಾಲಕಿಯ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ 60 ವರ್ಷದ ವೃದ್ಧ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆ ಬಾಲಕಿ ಇದೀಗ ಮಗುವಿಗೆ ಜನ್ಮ ನೀಡಿದ್ದ ಪ್ರಕರಣವೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









