ಮರ್ಯಾದೆ ಕೊಡದ ಮಗನ ತಲೆ-ಕೈಕಾಲು ಕಡಿಸಿದ ಪಾಪಿ ತಂದೆ : ಚಿಕ್ಕ ಮಗನಿಂದಲೇ ಸುಪಾರಿ ಕೊಡಿಸಿದ ಕ್ರೂರಿ..!
ಬೆಂಗಳೂರು: ಯಾವ ಮನೆಯಲ್ಲಿ ತಾನೆ ಸಮಸ್ಯೆ ಇರೋದಿಲ್ಲ. ಗಲಾಟೆ ಇರೋದಿಲ್ಲ. ಕಿರಿಕಿರಿ ಇರೋದಿಲ್ಲ. ಹಾಗಂತ ಯಾವ ತಂದೆ ಜನ್ಮ ನೀಡಿದ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡ್ತಾನೆ. ಆದ್ರೆ ಇಂತಹ ಒಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಗ ಸದಾ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂಬ ಕಾರಣಕ್ಕೆ ತಂದೆಯೊಬ್ಬ ಸ್ವಂತ ಮಗನನ್ನೆ ಕೊಲೆ ಮಾಡಿಸಿದ್ದಾನೆ.
ಇತ್ತೀಚೆಷ್ಟೇ ಎಲೆಮಲ್ಲಪ್ಪನಹಳ್ಳಿ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆದ್ರೆ ಆ ಶವಕ್ಕೆ ಕೈಕಾಲು-ರುಂಡ ಇರಲಿಲ್ಲ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡ ಪೊಲೀಸರಿಗೆ ಆಘಾತಕಾರಿ ವಿಚಾರ ಗೊತ್ತಾಗಿದೆ. ಕೇಶವ್ ಪ್ರಸಾದ್ ಎಂಬಾತ ತನ್ನ ಸ್ವಂತ ಕೌಶಲ್ ಪ್ರಸಾದ್ ನನ್ನ ಕೊಲೆ ಮಾಡಿಸಿದ್ದಾನೆ. ಕೌಶಲ್ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ, ಗೌರವ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಚಿಕ್ಕ ಮಗನ ಕೈಯಿಂದಲೇ ಸುಪಾರಿ ಕೊಡಿಸಿ ಕೊಲೆ ಮಾಡಿಸಿದ್ದಾನೆ.
ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ : ಹೊರಗೆ ಹೋಗಿದ್ದಾಗ ಸ್ಕೆಚ್ ಹಾಕಿ ಕೊಲ್ಲಿಸಿದಳು ಪಾಪಿ..!
ಎಲೆಮಲ್ಲಪ್ಪನಹಳ್ಳಿ ಕೆರೆಯಲ್ಲಿ ಶವ ಪತ್ತೆಯಾದ ದಿನವೇ ಕೇಶವ್ ಪ್ರಸಾದ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದರು. ಇತ್ತ ಅದೇ ದಿನ ಕೆರೆಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರಿಗೆ ಈ ಶವ ಕೇಶವ್ ಪ್ರಸಾದ್ ಮಗನದ್ದೇ ಎಂದು ಗೊತ್ತಾಗಿತ್ತೆ. ಆನಂತರ ಶವಸಂಸ್ಕಾರಕ್ಕೂ ಮನೆಯವರಿಗೆ ದೇಹ ನೀಡಿದ್ದಾರೆ. ನಂತರ ತನಿಖೆ ಶುರು ಮಾಡಿದ ಪೊಲೀಸರಿಗೆ ತಂದೆಯ ಕರಾಳ ಮುಖ ಬಯಲಾಗಿದ್ದು, ಕೇಶವ್ ಪ್ರಸಾದ್ , ತಮ್ಮ ಕೌಸ್ತುಬ್ ಪ್ರಸಾದ್ ಸೇರಿದಂತೆ ಕೆಲ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel