ಜೈಲಲ್ಲಿ ತಂದೆ, ಕೈ ಬಿಟ್ಟ ತಾಯಿ, ರಸ್ತೆಬದಿಯಲ್ಲಿ ಬಾಲಕ: ಯುಪಿಯಲ್ಲಿ ಮನಕಲಕುವ ಘಟನೆ
ಲಖನೌ : ತಂದೆ ತಾಯಿ ಕೈ ಬಿಟ್ಟ ಕಾರಣ ಮನೆ ಇಲ್ಲದೆ ಪುಟ್ಟ ಹುಡುಗನೊಬ್ಬ ತನ್ನ ಮುದ್ದಿನ ಶ್ವಾನದೊಂದಿಗೆ ರಸ್ತೆ ಬದಿಯಲ್ಲಿ ಮಲಗುತ್ತಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬಾಲಕನನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಈ ಬಾಲಕನ ತಂದೆ ಜೈಲಿಗೆ ಹೋಗಿದ್ದು, ತಾಯಿ ಮಗನನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ವಾಸಿಸಲು ಮನೆ ಇಲ್ಲದೆ ಅಂಕಿತ್ ತನ್ನ ಶ್ವಾನದೊಂದಿಗೆ ರಸ್ತೆಬದಿಯಲ್ಲಿ ಮಲಗುತ್ತಿದ್ದಾನೆ.
ಇದನ್ನೂ ಓದಿ : ಕರ್ನಾಟಕ ಗೋಹತ್ಯೆ ವಿಧೇಯಕ : ಗೋವಾ ವ್ಯಾಪಾರಿಗಳಿಂದ ವಿರೋಧ
ಪೋಷಕರು ಬಿಟ್ಟು ಹೋದಾಗ ಅಂಕಿತ್ ಜೀವನ ನಡೆಸಲು ಬಲೂನುಗಳನ್ನು ಮಾರಾಟ, ಟೀ ಸ್ಟಾಲ್ ಗಳಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಂಕಿತ್ ಗೆ ಸ್ನೇಹಿತನಾಗಿದ್ದು ಡ್ಯಾನಿ ಎಂಬ ಶ್ವಾನ.
ಅಂಕಿತ್ ಇದರೊಂದಿಗೆ ಕಾಲ ಕಳೆಯಲು ಆರಂಭಿಸಿದ್ದಾನೆ. ಕೆಲ ದಿನಗಳ ಹಿಂದೆ ಮುಚ್ಚಿದ ಅಂಗಡಿಯೊಂದರ ಹೊರಗೆ ರಾತ್ರಿ ಕಂಬಳಿ ಹೊದ್ದು ಮಲಗಿದ್ದ ಅಂಕಿತ್ ಮತ್ತು ಡ್ಯಾನಿಯ ಫೋಟೋವನ್ನು ಯಾರೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದಿನಿಂದ ಬಾಲಕನನ್ನು ಪತ್ತೆ ಹಚ್ಚಲು ಮುಜಫರ್ ನಗರದ ಎಸ್ ಎಸ್ ಪಿ ಅಭಿಷೇಕ್ ಯಾದವ್ ಹುಡುಕಾಟ ನಡೆಸಿದ್ದರು. ಕೊನೆಗೂ ಪೊಲೀಸರು ಆತನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಅಂಕಿತ್ ಪೊಲೀಸರ ಆರೈಕೆಯಲ್ಲಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









